ಬೆಳ್ತಂಗಡಿ: 2025-26 ರ ಸಾಲಿನ ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯು ಫೆ.18 ರಂದು ಗೂಗಲ್ ಮೀಟ್‌ನಲ್ಲಿ ಅಭಾಸಾಪ ರಾಜ್ಯಾಧ್ಯಕ್ಷರಾದ ಡಾ| ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜವಾಬ್ದಾರಿ ಘೋಷಣೆಯನ್ನು ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ್ ಭಟ್‌ರವರು ನಿರ್ವಹಿಸಿದರು.

ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಕುಳಮರ್ವ , ಕಾರ್ಯದರ್ಶಿಯಾಗಿ ಶ್ರೀಮತಿ ಸುಭಾಷಿಣಿ, ಕೋಶಾಧಿಕಾರಿಯಾಗಿ ಕೇಶವ ಭಟ್ ಅತ್ತಾಜೆಯವರು ಪುನರಾಯ್ಕೆಗೊಂಡಿದ್ದಾರೆ. ಸಮಿತಿಯ ಉಪಾಧ್ಯಕ್ಷರಾಗಿ ರಾಮಕೃಷ್ಣ ಭಟ್ ಬದನಾಜೆ ಮತ್ತು ವಿಶ್ವೇಶ್ವರ ಭಟ್ ಉಂಡೆಮನೆಯವರು ಜವಾಬ್ದಾರಿ ಸ್ವೀಕರಿಸಿದರು. ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ವಿನುತಾ ರಜತ್ ಗೌಡ ಮತ್ತು ಶ್ರೀಮತಿ ಸಂತೋಷಿಣಿ, ಹಾಗೂ ಸಾಹಿತ್ಯ ಕೂಟ ಪ್ರಮುಖ್ ಆಗಿ ಶ್ರೀಮತಿ ಅಶ್ವಿಜ ಶ್ರೀಧರ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವನಿತಾ ವಿ. ಶೆಟ್ಟಿ, ಮಕ್ಕಳ ಪ್ರಕಾರ ಪ್ರಮುಖ್ ಆಗಿ ಶ್ರೀಮತಿ ಮೇಧಾ , ವಿದ್ಯಾರ್ಥಿ ಪ್ರಕಾರ ಪ್ರಮುಖ್ ಆಗಿ ಮಹಾಬಲ ಗೌಡ ,ಮಾಧ್ಯಮ ಪ್ರಮುಖ್ ಆಗಿ ಶ್ರೀನಿವಾಸ್ ತಂತ್ರಿ ಯುವರು ಜವಾಬ್ದಾರಿಯನ್ನು ಸ್ವೀಕರಿಸಿದರು.
ಕಾರ್ಯಕಾರಿಣಿ ಸದಸ್ಯರಾಗಿ ಗುರುನಾಥ್ ಪ್ರಭು, ಶ್ರೀಮತಿ ಭಾರತಿ ಕಾಪಿನಡ್ಕ ಮತ್ತು ಶ್ರೀಮತಿ ಸುಂದರಿಯವರು ನಿಯುಕ್ತಿಗೊಂಡರು. ಇದರೊಂದಿಗೆ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಆಶಾ ಅಡೂರು , ಕಾರ್ಯದರ್ಶಿಯಾಗಿ
ಶ್ರೀಮತಿ ಮೇಘನಾ ಪ್ರಶಾಂತ್ ಹೊಳ್ಳ ,ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವನಜಾ ಜೋಷಿ ಹಾಗೂ ಕೋಶಾಧಿಕಾರಿಯಾಗಿ
ಶ್ರೀಮತಿ ನಯನಾ ಟಿ. ಯವರಿಗೆ ಜವಾಬ್ದಾರಿಯನ್ನು ನೀಡಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಅಭಾಸಾಪದ ಧ್ಯೇಯೋದ್ದೇಶಗಳನ್ನು ವಿವರಿಸಿ ಶುಭಾಶಯ ಕೋರಿದರು. ನಾ. ಮೊಗಸಾಲೆಯವರು ಜವಾಬ್ದಾರಿ ಪಡೆದುಕೊಂಡ ಎಲ್ಲರನ್ನೂ ಅಭಿನಂದಿಸಿ ಧ್ಯೇಯೋದ್ದೇಶದಂತೆ ಜವಾಬ್ದಾರಿಗಳನ್ನು ನಿರ್ವಹಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಶೈಲೇಶ್, ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ ಹಾಗೂ ವಲಯದಲ್ಲಿ ನಿಯುಕ್ತಿಗೊಂಡ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗಣೇಶ್ ಅಡಿಗರವರು ಕಾರ್ಯಕ್ರಮವನ್ನು ನಿರ್ವಹಿಸಿದರು.