23 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ-ಪುತ್ತೂರು ಮುಳಿಯದಲ್ಲಿ ನವರತ್ನ ಉತ್ಸವದ ಸಂಭ್ರಮ: ಒಂಬತ್ತು ವಿಭಿನ್ನ ರತ್ನದ ಕಲ್ಲುಗಳ ಹಾಗೂ ನವರತ್ನ ಆಭರಣಗಳ ಪ್ರದರ್ಶನ

ಬೆಳ್ತಂಗಡಿ: ನವೀನತೆ ಹಾಗೂ ಪರಿಶುದ್ಧತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜ್ಯುವೆಲ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಪೆ.15 ರಿಂದ 28 ರವರೆಗೆ ನವರತ್ನ ಉತ್ಸವ ಪ್ರಾರಂಭಗೊಂಡಿದೆ.

ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯದಲಿ 13 ದಿನಗಳ ಕಾಲ ನವರತ್ನ ಉತ್ಸವದಲ್ಲಿ ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯ ಗಳಾದ ನವರತ್ನ ಆಭರಣಗಳ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ.

ನವರತ್ನ ಆಭರಣಗಳದ ಉಂಗುರ , ನೆಕ್ಲೇಸ್, ಬ್ರೇಸ್ಲೆಟ್ಸ್, ಪದಕ, ಬಳೆ ಮತ್ತು ಸರಗಳು ಅಧಿಕ ವಿನ್ಯಾಸದ ನವರತ್ನ ಆಭರಣಗಳ ಅಮೋಘ ಸಂಗ್ರಹವಿದೆ. ಮಹಿಳೆಯರ ಮನಸೂರೆಗೊಳಿಸುವ ರೀತಿಯಲ್ಲಿ ಚಿನ್ನಾಭರಣದ ಸಂಗ್ರಹ ಹೊಂದಿರುವ ಮುಳಿಯದಲ್ಲಿ ಗ್ರಾಹಕರು ಉತ್ಸವದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಬೆಳ್ತಂಗಡಿ ಮುಳಿಯ ಮಳಿಗೆಯಲ್ಲಿ ಎಕ್ಸಲ್ ಕಾಲೇಜ್ ಗುರುವಾಯನಕೆರೆಯ ಉಪನ್ಯಾಸಕರುಗಳಾದ ಶ್ರೀಮತಿ ಸಹನಾ ಜೈನ್, ಕುಮಾರಿ ನಿಶಾ ಪೂಜಾರಿ, ಶ್ರೀಮತಿ ಶ್ರುತಿ ಶೆಟ್ಟಿ ಅವರು ನವರತ್ನ ಆಭರಣಗಳನ್ನು ಅನಾವರಣಗೊಳಿಸಿದರು.

ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಶಾಖಾ ಪ್ರಬಂಧಕಾರದ ಲೋಹಿತ್ ಕುಮಾರ್ ಹಾಗೂ ಉಪ ಶಾಖಾ ಪ್ರಬಂಧಕಾರದ ದಿನೇಶ್ ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ: ಕನ್ನಡ ಸಾಹಿತ್ಯ ಸಮ್ಮೇಳನವು ಸುವರ್ಣ ಕರ್ನಾಟಕದ ಆಶಯವನ್ನು ಬಿಂಬಿಸುವಂತಿರಲಿ: ಶಾಸಕ ಹರೀಶ್ ಪೂಂಜ

Suddi Udaya

ಕನ್ಯಾಡಿ -I : ಮೇರ್‍ಲ ನಿವಾಸಿ ಕೃಷಿಕ ಸಾಂತಪ್ಪ ಗೌಡ ನಿಧನ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಗಣಹೋಮ ಹಾಗೂ 31 ಜೋಡಿ ಸತ್ಯನಾರಾಯಣ ಪೂಜೆ

Suddi Udaya

ಪಡಂಗಡಿ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ

Suddi Udaya
error: Content is protected !!