
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಎಂಟು ಗ್ರಾಮಗಳನ್ನು ಒಳಗೊಂಡ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರಾಗಿ, ಉದ್ಯಮಿ, ಸಮಾಜಸೇವಕ, ಸಂಘಟಕ ಸುಂದರ ಹೆಗ್ಡೆ ಬಿಇ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಬರ್ಕಜೆ ಫೆ.19 ರಂದು ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾದ ರಾಮದಾಸ ನಾಯಕ್, ಸಂದೀಪ್ ಹೆಗ್ಡೆ, ಸಂತೋಷ್ ಜೈನ್, ಪ್ರವೀಣ್ ಪರಿಯೊಟ್ಟು,ಪ್ರಶಾಂತ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರಾಜು ನಾಯ್ಕ್, ನಾಗಪ್ಪ, ಆಶಾ ಸುಂದರ, ರೋಹಿನಿ ಪ್ರಕಾಶ್ ಉಪಸ್ಥಿತರಿದ್ದರು.

ಎಂಟು ಗ್ರಾಮ ವ್ಯಾಪ್ತಿಯ ಸೊಸೈಟಿ ವೇಣೂರು, ಮೂಡುಕೋಡಿ, ಕರಿಮಣೇಲು, ನಿಟ್ಟಡೆ, ಕುಕ್ಕೇಡಿ, ಅಂಡಿಂಜೆ, ಬಜಿರೆ ಹಾಗೂ ಗುಂಡೂರಿ ಗ್ರಾಮಗಳ ವ್ಯಾಪ್ತಿಗೆ ಒಳಗೊಂಡಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ರಿಂದ 2029-30ರವರೆಗಿನ ಅವಧಿಗೆ ಜ.12 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಪ್ರತಿಮಾ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಭಾರತೀಯ ಜನತಾ ಪಾರ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.ಜಯಂತ್ ಕೋಟ್ಯಾನ್ ಸೇರಿದಂತೆ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.