ಪಾಂಡವರಕಲ್ಲು: ಹಳೆ ವಿದ್ಯಾರ್ಥಿ ಸಂಘ ಬಡಗ ಕಜೆಕಾರು ಸಹಯೋಗದಲ್ಲಿ ಮಾಡ ಪ್ರೀಮಿಯರ್ ಲೀಗ್ ಸೀಸನ್ -6ರ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ನಡೆಯಿತು.

ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪಾಲೇದು ಮಾಲಕತ್ವದ ಶ್ರೀ ಶಾರದಾಂಭ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನ ಗಳಿಸಿತು. ನಾಯಕ ಸುಜನ್, ಸ್ವಾಯತ್, ದಿಕ್ಷೀತ್, ಚೇತನ್, ಪ್ರನೀತ್, ರಾಜೇಶ್, ವಿನಯ್, ಲಿಖಿತ್, ಮಿಥುನ್, ಬಾರ್ಯ ಗ್ರಾ.ಪಂ.ಸದಸ್ಯ ವಸಂತ ಬೋಲ್ಡೆಲು ಹಾಗೂ ಚರಣ್ ತಂಡದಲ್ಲಿದ್ದರು.