April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ 2023 -2024ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಇವರ ಅಧ್ಯಕ್ಷತೆಯಲ್ಲಿ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್.ಬಿ.ಕೆ ಸೇವಿತ ಒಕ್ಕೂಟದ ವಾರ್ಷಿಕ ವರದಿ ಹಾಗೂ ಒಕ್ಕೂಟದ ಆಯವ್ಯಯ ಮಂಡಿಸಿ ಅನುಮೋದನೆಯನ್ನು ಪಡೆದರು. ವಲಯ ಮೇಲ್ವಿಚಾರಕರಾದ ಜಯಾನಂದರವರು ಪ್ರಾಸ್ತವಿಕವಾಗಿ ಮಾತನಾಡಿ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಗೋಪಿಕಾ ಸಂಜೀವಿನಿ ಸದಸ್ಯರು ಮಾಡಿದ ರಾಗಿಹುಡಿ ಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಪ್ರಶಸ್ತಿ ಪಡೆದ ಜಯಾನಂದರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ರಕ್ಷಿತ್ ಜೈನ್ ಸಾಮಾಜಿಕ ಲೆಕ್ಕ ಪರಿಶೋದನೆಯ ಜಿಲ್ಲಾ ಸಂಯೋಜಕರು ಎನ್ ಆರ್.ಎಲ್.ಎಂ ಬಗ್ಗೆ ಮಾತನಾಡಿದರು. ಸಂಘದ ಸದಸ್ಯರು “ನಮ್ಮ ಕಸ ” ನಮ್ಮ ಜವಾಬ್ದಾರಿ ” ಎಂಬ ವಿಷಯ ಬಗ್ಗೆ ಕಿರು ಪ್ರಹಸನ ದ ಮೂಲಕ ಸಂದೇಶ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಗೌಡ, ಶಕ್ತಿ ಸಂಜೀವಿನಿ ಸಂಘದ ಸದಸ್ಯೆ ಎವುಲಿನ ಡಿಸಿಲ್ವ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಲಕ್ಕಿ ಗೇಮ್ ನಲ್ಲಿ ಬಹುಮಾನವನ್ನು ಸಂಘದ ಸದಸ್ಯರಾದ ಯಮುನಾ, ಪ್ರಿಯದರ್ಶಿನಿ, ಬಾಲಕ ಇವರು ಪಡೆದುಕೊಂಡರು.

ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಧ್ಯಕ್ಷಿಯ ಭಾಷಣ ಮಾಡಿದರು. ಕೃಷಿ ಸಖಿ ಹರಿಣಾಕ್ಷಿ ನಿರೂಪಣೆ ಮಾಡಿ ಎಲ್.ಸಿಆರ್.ಪಿ ಜಯಂತಿ ಸ್ವಾಗತಿಸಿದರು. ಎಮ್ ಬಿಕೆ ಸೇವಿತ ಧನ್ಯವಾದವಿತ್ತರು

Related posts

ಕೊಕ್ಕಡ: ಡ್ರೈವರ್ ಮೂರ್ಛೆಕ್ಕೊಳಗಾಗಿ ಏಕಾಏಕಿ ಚಲಿಸಿದ ವಾಹನ : ಜಂಕ್ಷನ್ ನಲ್ಲಿ ನಿಂತಿದ್ದ ಮಹಿಳೆಗೆ ಡಿಕ್ಕಿ

Suddi Udaya

ಶಿಬರಾಜೆ ಕಲ್ಲೇರಿಮಾರು ನಿವಾಸಿ ಲಕ್ಷ್ಮಣ ಗೌಡ ನಿಧನ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ರಸ್ತೆಗೆ ಹಾಕಿದ್ದ ಬೇಲಿ ತೆರವು

Suddi Udaya

ಕಿಲ್ಲೂರು ಎನ್ನೆಸ್ಸೆಸ್ ಶಿಬಿರದ ಸ್ಥಳೀಯ ಸಮಿತಿ ರಚನೆ

Suddi Udaya

ವೇಣೂರು: ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೂರುಲ್ ಹುದಾ ದರ್ಸ್ ಪ್ರಾರಂಭೋತ್ಸವ

Suddi Udaya
error: Content is protected !!