ಬೆಳ್ತಂಗಡಿ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಳ್ತಂಗಡಿ ಮಹಿಳಾ ವೃಂದ, ಪುತ್ತೂರು ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಬೆಳ್ತಂಗಡಿ ರೋಟರಿ ಅನ್ಸ್ ಕ್ಲಬ್, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ , ಬೆಳ್ತಂಗಡಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಬ್ರಾಂಚ್ ಇದರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ಮಾ.2 ರಂದು ಬೆಳ್ತಂಗಡಿ ಐ.ಬಿ.ರೋಡ್ ನಲ್ಲಿರುವ ಮಹಿಳಾ ವೃಂದದಲ್ಲಿ ನಡೆಯಲಿದೆ.
ದಂತ ವೈದ್ಯರಾದ ಆಶಾ ಪಿದಮಲೆ, ದೀಪಾಲಿ ಡೋಂಗ್ರೆ, ಸ್ತ್ರೀ ರೋಗ ತಜ್ಞೆ ವಿನಯ್ ಕಿಶೋರ್ ಹಾಗೂ ಆಯುಷ್ ವೈದ್ಯೆ ಸುಷ್ಮಾ ಡೋಂಗ್ರೆ ಭಾಗವಹಿಸುವರು.
ಅಧ್ಯಕ್ಷೆ ನೇತ್ರಾ ಅಶೋಕ್, ಕಾರ್ಯದರ್ಶಿ ಪ್ರೀತಿ ಆರ್. ರಾವ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.