ವೇಣೂರು: ತಾಲೂಕಿನ ದೊಡ್ಡ ವಿಸ್ತಾರವನ್ನು ಹೊಂದಿರುವ ಎಂಟು ಗ್ರಾಮಗಳನ್ನು ಒಳಗೊಂಡಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಅವಧಿಗೆ ನಡೆದ ಚುನಾವಣೆಯಲ್ಲಿ 12 ರಲ್ಲಿ 12 ಸಹಕಾರಿ ಭಾರತಿ ಅಭ್ಯರ್ಥಿಗಳು ವಿಜಯಶಾಲಿಯಾಗಿ ಸತತವಾಗಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ.

ಸಂಘದ ನೂತನ ಅಧ್ಯಕ್ಷರಾಗಿ ಮೂರನೇ ಭಾರಿ ಆಯ್ಕೆಯಾದ ಸುಂದರ್ ಹೆಗ್ಡೆ,ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಹಾಗೂ ನಿರ್ದೇಶಕರುಗಳನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ಕಾರ್ಯಕರ್ತರು ಗೌರವಿಸಿ,ಅಭಿನಂದನೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೊಟ್ಯಾನ್ ಮಾತನಾಡಿ ಎಲ್ಲಾ ನಿರ್ದೇಶಕರುಗಳು ಮುಂದಿನ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಒಮ್ಮತದಿಂದ ಆಯ್ಕೆಗೊಳಿಸಿದ್ದಾರೆ. ಜನರಿಗೆ ಉತ್ತಮ ಸೇವೆ ನೀಡಿ ಅವರೊಂದಿಗೆ ಬೇರೆತು ಸ್ಪಂದಿಸಬೇಕು.ರೈತಾಪಿ ವರ್ಗದವರ ಕಷ್ಟದಲ್ಲಿ ಭಾಗಿಯಾಗಿ, ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಅಭಿನಂದಿಸಿದರು.

ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಮಾತನಾಡಿ, ಜಯಂತ್ ಕೊಟ್ಯಾನ್ ರವರು ಚುನಾವಣಾ ಪ್ರಭಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡು 8 ಗ್ರಾಮಗಳಲ್ಲಿ ಅಧಿಕ ಮತವನ್ನು ತೆಗೆಸಿ ಕೊಟ್ಟು ಸಹಕಾರಿ ಭಾರತಿಯ ಎಲ್ಲಾ ಅಭ್ಯರ್ಥಿಗಳು ವಿಜಯಶಾಲಿ ಆಗಲು ಸಹಕರಿಸಿದ್ದಾರೆ. ಕಾರ್ಯಕರ್ತರು ಶ್ರಮ ಅಪಾರವಾಗಿದ್ದು, ನಮ್ಮ ಒಗ್ಗಟ್ಟು ಎಂದಿಗೂ ಒಡೆಯದೆ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಸಂಘದ ಅಭಿವೃದ್ಧಿಗೆ ಜನರ ಸಹಕಾರ ಸದಾ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಮೋಹನ್ ಅಂಡಿಂಜೆ,ಮಲ್ಲಿಕಾ ಹೆಗ್ಡೆ ವೇಣೂರು,
ರಾಜೇಶ್ ಪೂಜಾರಿ ಮೂಡುಕೋಡಿ,ನೇಮಯ್ಯ ಕುಲಾಲ್ ವೇಣೂರು,ಅಭಿಜಿತ್ ಜೈನ್ ನಾರಾವಿ, ಪುರುಷೋತ್ತಮ ರಾವ್ ವೇಣೂರು,ಜನಾರ್ಧನ ಪೂಜಾರಿ ಕುಕ್ಕೇಡಿ, ಸುಧೀರ್ ಭಂಡಾರಿ ವೇಣೂರು,ರಮೇಶ್ ಹೆಗ್ಡೆ ಪಡ್ಡಂದಡ್ಕ,ಪ್ರಶಾಂತ್ ಹೆಗ್ಡೆ ಬಜಿರೆ,ರಾಜ್ ಶೇಖರ್ ಅಂಡಿಂಜೆ,ವಿಜಯ ಗೌಡ ವೇಣೂರು,ಕಾಶಿನಾಥ್ ಬಜಿರೆ,ಶೇಖರ್ ಪೂಜಾರಿ ಕುಂಟಲ್ಮಾರ್ ಬಜಿರೆ,ವಿಠಲ ಬುಳೆಕ್ಕಾರ,ಮಹಮ್ಮದ್ ಕರಿಮೇಣಲು, ಮೋನಪ್ಪ ಗೌಡ ಜೋಗಿಲಬೆಟ್ಟು,ದಿನೇಶ್ ಕುಲಾಲ್ ಪಂಡಿಜೆ,ವಸಂತ ಶೆಟ್ಟಿ ಬಜಿರೆ, ಗೋಪಾಲ ಶೆಟ್ಟಿ ಬುಳೆಕ್ಕರ,ಮೋಹನ್ ಕುಲಾಲ್ ನಿಟ್ಟಡೆ,ಯೋಗೀಶ್ ಬಿಕ್ರೋಟ್ಟು,ದಿನೇಶ್ ತಾರಿಪಡ್ಪು,ಪ್ರಶಾಂತ್ ಗೌಡ ಮೂಡುಕೋಡಿ,ಸತೀಶ್ ವೇಣೂರು
ಹಾಗೂ ಇತರರು ಉಪಸ್ಥಿತರಿದ್ದರು.