ಬೆಳ್ತಂಗಡಿ : ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇಲ್ಲಿಯ ಅಂಬುಲೆನ್ಸ್ ಚಾಲಕನಾಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ವಾಹನ ಚಾಲಕನಾಗಿ ಸುಮಾರು 26 ವರ್ಷಗಳ ಸುಧೀರ್ಘ ಸೇವೆಯ ನಂತರ ಸರ್ಕಾರಿ ಸೇವೆಗೆ ವಯೋ ನಿವೃತ್ತಿ ಹೊಂದಿದ ಅಬ್ದುಲ್ ರಝಾಕ್ ಅವರಿಗೆ ವಿದಾಯ ಕೂಟ ಕಾರ್ಯಕ್ರಮ ಫೆ. 19 ರಂದು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ಎಲ್ಲಾ ಗಣ್ಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ, ಸುಳ್ಯ ತಾಲೂಕು ಆರೋಗ್ಯಾಧಿಕಾರಿ, ಹಾಗೂ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿ ಶುಭ ಕೋರಿದರು. ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿಗಳು ಎಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿ, ವೃತ್ತಿಯಲ್ಲಿ ಸೌಮ್ಯ ಸ್ವಭಾವ, ನಿಷ್ಠೆ, ಸಮಯಪ್ರಜ್ಞೆ, ಅಪಘಾತ ರಹಿತ ಉತ್ತಮ ಚಾಲನೆಯ ಸೇವೆಯನ್ನು ಪ್ರಶಾಂಸಿಸಿ ಶಾಲು, ಫಲಪುಷ್ಪ ನೀಡಿ ಗೌರವಿಸಲಾಯಿತು.