36.4 C
ಪುತ್ತೂರು, ಬೆಳ್ತಂಗಡಿ
February 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೆರಿಯ ಸುಂದರ ಮಲೆಕುಡಿಯ ಅವರ ಕೊಲೆ ಯತ್ನ ಪ್ರಕರಣ: ನ್ಯಾಯಾಲಯದ ತೀರ್ಪು ಸ್ವಾಗತಾರ್ಹ; ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕ

ಬೆಳ್ತಂಗಡಿಯ ನೆರಿಯ ಗ್ರಾಮದ ಕಾಟಾಜೆ ಸುಂದರ ಮಲೆಕುಡಿಯ ಅವರ ಕೈಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೊಟ್ಟಿರುವ ತೀರ್ಪು ಅತ್ಯಂತ ಐತಿಹಾಸಿಕ ಮತ್ತು ಸ್ವಾಗತಾರ್ಹವಾದುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.

ಇಡೀ ಈ ಪ್ರಕರಣವನ್ನು ನ್ಯಾಯಾಲಯದ ಕಟಕಟೆಗೆ ತಲುಪಿಸಿ ದಾಳಿಗೊಳಗಾದ ಕುಟುಂಬವನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು , ಹೋರಾಟಗಳು ಅತ್ಯಂತ ರೋಮಾಂಚನಕಾರಿ. ಈ ಪ್ರಕರಣವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಡಿವೈಎಫ್ಐ , ಸಿಪಿಐ(ಎಂ) ಸೇರಿದಂತೆ ಮಲೆಕುಡಿಯರ ಸಮುದಾಯದ ಸಂಘಟನೆಗಳು ಮತ್ತು ಇತರೆ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ನಿರಂತರ ಹೋರಾಟವನ್ನು ನಡೆಸಿದವು.

ಆಸ್ಪತ್ರೆಗೆ ಸಿಪಿಐ(ಎಂ) ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ.ಕಾ.ಸೀತರಾಮ್ ಯೆಚೂರಿ, ಮುಂದುವರಿದ ಹೋರಾಟದಲ್ಲಿ ತ್ರಿಪುರ ಸಂಸತ್ ಸದಸ್ಯರಾಗಿದ್ದ ಕಾಂ.ಜಿತೇಂದ್ರ ಚೌಧುರಿ ಭಾಗವಹಿಸಿದ್ದರು. ಕಿಸಾನ್ ಸಭಾದ ವಿಜೂಕೃಷ್ಣನ್ ಭೇಟಿ ನೀಡಿದ್ದರು.

ಈ ಪ್ರಕರಣದಲ್ಲಿ ಧೃಡವಾಗಿ ನಿಂತು ಅತ್ಯಂತ ಧೈರ್ಯದಿಂದ ಎಲ್ಲಾ ಒತ್ತಡ, ಸಮಸ್ಯೆಗಳನ್ನು ಎದುರಿಸಿ ನಿಂತ ಸುಂದರ ಮಲೆಕುಡಿಯ ಮತ್ತು ಅವರ ಕುಟುಂಬದವರನ್ನು ವಿಜಯವಾಡದಲ್ಲಿ ಜರುಗಿದ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಕೇರಳದ ಮುಖ್ಯಮಂತ್ರಿ ಕಾಂ. ಪಿಣರಾಯಿ ವಿಜಯನ್ ರವರು ಅಭಿನಂದಿಸಿದ್ದರು.

ಈ ಪ್ರಕರಣ ತಾರ್ಕಿಕ ಹಂತಕ್ಕೆ ತಲುಪಲು ಶ್ರಮಿಸಿದ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ , ಬಂಟ್ವಾಳ ಎಎಸ್ಪಿಯಾಗಿದ್ದ ರಾಹುಲ್ ಕುಮಾರ್ ಸೇರಿದಂತೆ ಸುಂದರ ಮಲೆಕುಡಿಯರ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ . ಇಡೀ ಘಟನೆಗೆ ಕಾರಣವಾಗಿದ್ದ ಜಮೀನು ವಿವಾದ ಇನ್ನೂ ಜೀವಂತವಾಗಿರುವುದು ನಮ್ಮ ವ್ಯವಸ್ಥೆಯ ದುರಂತ. ನೆರಿಯ ಗ್ರಾಮದ ಕಾಟಾಜೆ , ಪರ್ಪಳ ಪ್ರದೇಶದ ಮಲೆಕುಡಿಯ ಸಮುದಾಯದ ಮನೆ , ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿರುವ ಜಮೀನಿಗೆ ಸೂಕ್ತ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತವಾಗಬೇಕು , ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ನಡೆಸಬೇಕಾದೀತೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ , ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.

Related posts

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

Suddi Udaya

ಮದ್ಯದ ಅಂಗಡಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ

Suddi Udaya

ಮುಂಡಾಜೆ: ವಿರಾಟ್ ಹಿಂದೂ ಸೇವಾ ಸಂಘದ ವತಿಯಿಂದ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya
error: Content is protected !!