ಬಳಂಜ: ಬಿವಿಎಲ್ ಬಳಂಜ ವಾಲಿಬಾಲ್ ಕ್ಲಬ್ ವತಿಯಿಂದ, ದಿಮಿಸೋಲೆ ತಂಡದ ಸಹಕಾರದಲ್ಲಿ ನಡೆದ ವಾಲಿಬಾಲ್ ಪಂದ್ಯದಲ್ಲಿ ಸಂತೋಷ್ ಪಿ ಕೋಟ್ಯಾನ್ ಮಾಲಕತ್ವದ ಕೋಟ್ಯಾನ್ ರಾಕರ್ಸ್ ತಂಡವು ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ವಿಜೇತ ತಂಡದಲ್ಲಿ ನಾಯಕ ಸುರೇಶ್ ಪೂಜಾರಿ ಹೇವ,ನಿತೇಶ್ ಹುಂಬೆಜೆ,ಪುರಂದರ ಪೂಜಾರಿ ಪೆರಾಜೆ,ಭಾಸ್ಕರ ಶೆಟ್ಟಿ ,ರಂಜಿತ್,ರಾಜೇಶ್,ಅನ್ವಿತ್ ಇದ್ದರು.
ಬಳಂಜ ವಾಲಿಬಾಲ್ ಕ್ಲಬ್ ನ ಅಧ್ಯಕ್ಷ ರಾಕೇಶ್ ಹೆಗ್ಡೆ,ದಿಮಿಸೋಲೆ ತಂಡದ ಸಂಚಾಲಕ ಯಶೋಧರ ಶೆಟ್ಟಿ ಹಾಗೂ ತಂಡದ ಸದಸ್ಯರು, ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.