22.6 C
ಪುತ್ತೂರು, ಬೆಳ್ತಂಗಡಿ
February 23, 2025
ತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ಮುಸ್ಲಿಮ್ ಜಮಾಅತ್ ಗುರುವಾಯನಕೆರೆ ಸರ್ಕಲ್ ವಾರ್ಷಿಕ ಮಹಾಸಭೆ

ಮದ್ದಡ್ಕ : ಕರ್ನಾಟಕ ಮುಸ್ಲಿಮ್ ಜಮಾ ಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ 2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಮದ್ದಡ್ಕದ ಸುನ್ನೀ ಸೆಂಟರ್ ನಲ್ಲಿ ನಡೆಯಿತು.


ಅಧ್ಯಕ್ಷತೆಯನ್ನು ಸರ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ವಹಿಸಿದ್ದರು. ಸಭೆಯ ವೀಕ್ಷಕರಾಗಿ ಇಬ್ರಾಹಿಂ ಕಕ್ಕಿಂಜೆ, ವಿಷಯ ಮಂಡನೆಯನ್ನು ಗುರುವಾಯನಕೆರೆ ಖತೀಬ್ ಎ.ಕೆ.ರಝಾ ಅಮ್ಜದಿ ನಡೆಸಿಕೊಟ್ಟರು. ವೇದಿಕೆಯಲ್ಲಿ ಎಸ್.ವೈ.ಎಸ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷರಾದ ಹಾಜಿ ಹಸೈನಾರ್ ಬಿ.ಬಿ.ಎಸ್., ಉಸ್ಮಾನ್ ಸಖಾಫಿ ಲಾಡಿ, ಹಮೀದ್ ಮುಸ್ಲಿಯಾರ್ ಉಳ್ತೂರು, ಮದ್ದಡ್ಕ ಮಸೀದಿ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ, ಅಬ್ಬೋನು ಮದ್ದಡ್ಕ,ಉಮ್ಮರ್ ಮಾಸ್ಟರ್ ಮದ್ದಡ್ಕ, ಉಮ್ಮರಬ್ಬ ಮದ್ದಡ್ಕ, ಪರಪ್ಪು ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಜಾರಿಗೆಬೈಲು ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮುಸ್ಲಿಯಾರ್, ಅಬ್ದುಲ್ ಕರೀಮ್ ಗೇರುಕಟ್ಟೆ ಹಾಗೂ ಗುರುವಾಯನಕೆರೆ ಸರ್ಕಲ್ ವ್ಯಾಪ್ತಿಯ ಪ್ರತೀ ಯೂನಿಟ್ ನ ಅಧ್ಯಕ್ಷ ಪದಾಧಿಕಾರಿಗಳು ಹಾಜರಿದ್ದರು.

ಹಂಝ ಗೋವಿಂದೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಗತ ವರ್ಷದ ವರದಿ ವಾಚನೆ ನಡೆಸಿದರು.ಅಬೂಸ್ವಾಲಿಹ್ ಗೇರುಕಟ್ಟೆ ಲೆಕ್ಕಪತ್ರ ಮಂಡಿಸಿದರು

Related posts

ಮೊಗ್ರು: ಲಕ್ಷ್ಮಿ ನಾರಾಯಣ ಭಜನಾ ಮಂದಿರ ಹಾಗೂ ಎಲ್.ಎನ್. ಫ್ರೆಂಡ್ಸ್ ಊಂತನಾಜೆ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ – ಎಲ್. ಎನ್. ಟ್ರೋಫಿ -2024

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯೋತವದ ಪ್ರಯುಕ್ತ ಯೋಧರು-ಪೋಲಿಸರಿಗೆ ಗೌರವಾರ್ಪಣೆ ‘ರಕ್ಷಕ ನಮನ’

Suddi Udaya

ಸೆ.6: ಕೊಕ್ಕಡದಲ್ಲಿ “ಸ್ವಾಮಿ ಪ್ರಸಾದ್ ಪ್ಯಾರಡೈಸ್” ವಸತಿ ಗೃಹ ಶುಭಾರಂಭ

Suddi Udaya

ನವ ವಿವಾಹಿತ, ಕಂಪನಿ ಉದ್ಯೋಗಿ, ನಾಲ್ಕೂರಿನ ಯುವಕ ಮೈಸೂರಲ್ಲಿ ಆತ್ಮಹತ್ಯೆ

Suddi Udaya

ಪಣಕಜೆಯ ಅರ್ಕಜೆ ಬಳಿ ಮನೆಗೆ ಗುಡ್ಡ ಕುಸಿದು ಹಾನಿ: ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರಿಂದ ಮಣ್ಣು ತೆರವು ಕಾರ್ಯ

Suddi Udaya

ಭಾರತ -ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya
error: Content is protected !!