ಬೆಳ್ತಂಗಡಿ: ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳ ಸ್ವಾಗತಕ್ಕೆ ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಸಿದ್ಧತೆ ಸಭೆ ಜರಗಿತು.
ಪಾದಯಾತ್ರಿಗಳಿಗೆ ಅಡುಗೆ, ವಸತಿ ಇತ್ಯಾದಿಗಳಿಗೆ ದೇವಸ್ಥಾನದಲ್ಲಿ ವ್ಯವಸ್ಥೆ ಕಲ್ಪಿಸುವುದು, ಸ್ವಚ್ಛತೆ ಕುರಿತು ಮಾಹಿತಿ, ಕುಡಿಯುವ ನೀರಿನ ವ್ಯವಸ್ಥೆ,ಅಗತ್ಯ ಸಂದರ್ಭಕ್ಕೆ ವಾಹನ, ಆರೋಗ್ಯ ಮುನ್ನೆಚ್ಚರಿಕೆ ಇತ್ಯಾದಿಗಳ ಕುರಿತು ತೀರ್ಮಾನಿಸಲಾಯಿತು.
ಯೋಜನೆಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಮಹಾಬಲ ಕುಲಾಲ್, ಯೋಜನಾಧಿಕಾರಿ ಸುರೇಂದ್ರ, ಸುರೇಶ ಮೊಯ್ಲಿ, ಜನಜಾಗೃತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷ ವೆಂಕಟ್ರಾಯ ಅಡೂರು, ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಕಜೆ ವೆಂಕಟೇಶ್ವರ ಭಟ್, ಸಮಿತಿ ಅಧ್ಯಕ್ಷ ವಾಸುದೇವ ಗೋಖಲೆ, ಕಾರ್ಯದರ್ಶಿ ಬಾಬು ಪೂಜಾರಿ, ಅರೆಕಲ್ಲು ರಾಮಚಂದ್ರ ಭಟ್, ಪುಷ್ಪರಾಜ ರೈ, ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ಪಾದಯಾತ್ರೆಯಲ್ಲಿ ಸಾಗಿ ಬರುವ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಚಾರ್ಮಾಡಿಯಿಂದಲೇ ಅಲ್ಲಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.