September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಕುಂಟಿನಿ ಎಸ್ ಸಿ ಕಾಲೊನಿಯಲ್ಲಿ 9ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ

ಉಜಿರೆ: ಉಜಿರೆಯ ಕುಂಟಿನಿ ಎಸ್.ಸಿ ಕಾಲೊನಿಯಲ್ಲಿ 9ನೇ ವರ್ಷದ ದೀಪಾವಳಿಯನ್ನು ಸಾಮೂಹಿಕವಾಗಿ ನ.14 ರಂದು ಆಚರಿಸಲಾಯಿತು.
ಲಕ್ಷ್ಮಿ ಪೂಜೆಯನ್ನು ಡಾ| ಎಂ ಎಂ.ದಯಾಕರ್ ಭಟ್ ರವರು ನೆರವೇರಿಸಿ ಮಾತನಾಡಿ ಮಹಾಲಕ್ಷ್ಮಿ ಮಂತ್ರೋಪದೇಶವನ್ನು ಕಾಲನಿಯ ಸರ್ವರಿಗೂ ಹಿರಿಕಿರಿಯರೆನ್ನದೆ ನೀಡಲಾಯಿತು. ಮಹಾಲಕ್ಷ್ಮಿಯ ಅನುಗ್ರಹದಿಂದ ಜೀವನದಲ್ಲಿ ಸಂತಾನ ಸಂಪತ್ತು ಆರೋಗ್ಯ ಮತ್ತು ಸುಖ ಗಳಿಸಬಹುದು ಎಂದರು.


ಈ ಹಿಂದಿನ ವರ್ಷಗಳಲ್ಲಿ ಪ್ರತೀ ಮನೆಗೆ ನೀಡಿದ ತುಳಸಿಕಟ್ಟೆಯ ಅಲಂಕಾರ ಮತ್ತು ಬಲಿಂದ್ರ ಲೆಪ್ಪು ಇವುಗಳನ್ನೂ ತಮ್ಮ ಮನೆಗಳಲ್ಲಿ ನಿಷ್ಠೆಯಿಂದ ಆಚರಿಸುವಂತೆ ವಿವರಿಸಲಾಯಿತು.ಕಿರಿಯರೆಲ್ಲರೂ ತಮಗಿಂತ ಹಿರಿಯರ ಪಾದಗಳಿಗೆ ವಂದಿಸಿ ಆಶೀರ್ವಾದ ಪಡೆದರು. ಹಬ್ಬದ ಸಂಭ್ರಮ ಆಚರಣೆಗಾಗಿ ಕಾಲನಿಯ ಪ್ರತೀ ಮನೆಗಳಿಗೆ ಅಕ್ಕಿ, ಬೆಲ್ಲ, ಬೇಳೆ ,ತೆಂಗಿನಕಾಯಿ ಮತ್ತು ಪಟಾಕಿಗಳನ್ನು ವಿತರಿಸಲಾಯಿತು. ಸಮಸ್ತರೂ ಹಣತೆಗಳನ್ನು ಬೆಳಗಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು.


ಮುಖ್ಯ ಅತಿಥಿಗಳಾಗಿ ಸಂಘದ ಉನ್ನತ ಅಧಿಕಾರಿಗಳಾದ ಶಿವಪ್ರಸಾದ್ ಮಲೇಬೆಟ್ಟು ರವರು ಆಗಮಿಸಿ ದೀಪಾವಳಿಯ ಮಹತ್ವ ವಿವರಿಸಿದರು ಮತ್ತು ಸಮಾಜದ ಎಲ್ಲಾ ವರ್ಗಗಳಿಗೂ ತಲುಪುವಂತೆ ಕಾರ್ಯಕ್ರಮ ಆಯೋಜಿಸುವುದು ಬಹಳ ಮುಖ್ಯ ಎಂದರು.
ಇನ್ನೋರ್ವ ಮುಖ ಅತಿಥಿ ಪೃಥ್ವಿರಾಜ್ ಶೆಟ್ಟಿ ಯವರು ಇಂತಹ ಕಾರ್ಯಕ್ರಮ ಆಯೋಜಿಸಿದವರು ಶ್ಲಾಘನೀಯರು ಎಂದರು .
ಕೃಷ್ಣಪ್ಪ ಉಪಸ್ಥಿತರಿದ್ದರು. ಆಗಮಿಸಿದ ಸರ್ವರಿಗೂ ರೋಟರಿ ಆನ್ಸ್ ಬೆಳ್ತಂಗಡಿ ಅಧ್ಯಕ್ಷೆ ಸಿಹಿತಿಂಡಿಗಳನ್ನು ವಿತರಿಸಿದರು.

Related posts

ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿಯಿಂದ ಸೇವಾಭಾರತಿ ಸಂಸ್ಥೆಗೆ ಉಪಕರಣಗಳ ಹಸ್ತಾಂತರ

Suddi Udaya

ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದಿಂದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ನಾಳ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ತಾಳಮದ್ದಳೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ದಂತ ವೈದ್ಯಕೀಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ

Suddi Udaya
error: Content is protected !!