ಪಡಂಗಡಿ: ಇಲ್ಲಿಯ ಅರಿಹಂತ್ ಕಾಂಪ್ಲೆಕ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಕಟಿಲೇಶ್ವರಿ ಟ್ರೇಡರ್ಸ್ ಶುಭಾರಂಭ ಕಾರ್ಯಕ್ರಮವು ಫೆ.21ರಂದು ನಡೆಯಿತು.
ಬಂಟರ ಯಾನೆ ನಾಡವರ ಸಂಘ ಮಾಜಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಮುಖ್ಯ ಅತಿಥಿಗಳು ಪಡಂಗಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಸುವರ್ಣ, ಪಡಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಫನಾ, ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಪಡಂಗಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್, ಪಡಂಗಡಿ ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್, ಶ್ರೀನಿವಾಸ ಶೆಟ್ಟಿ ಹಂಕರಜಾಲು ಪ್ರಗತಿಪರ ಕೃಷಿಕ ಗರ್ಡಾಡಿ, ಅರಿಹಂತ್ ಕಾಂಪ್ಲೆಕ್ಸ್ ಮಾಲಕ ಅರಿಹಂತ್ ಜೈನ್, ಹಾಗೂ ಪ್ರಮುಖರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು.
ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಸಂತೋಷ್ ಶೆಟ್ಟಿ ಹಲ್ಲಂದೋಡಿ ಸ್ವಾಗತಿಸಿದರು.