ನೆರಿಯ ಗ್ರಾಮದ ಸುಂದರ ಮಲೆಕುಡಿಯರ ಕೈಗೆ ಕಳೆ ಕೊಚ್ಚುವ ಯಂತ್ರದಿಂದ ಅಮಾನುಷವಾಗಿ ಕಡಿದು ಬೆರಳನ್ನು ತುಂಡರಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ದಶಕದ ಬಳಿಕ ಸಮಾಧಾನಕರ ತೀರ್ಪನ್ನು ನೀಡಿದೆ.
ಆರೋಪಿಯ ಬಂಧನಕ್ಕೆ ಆಗ್ರಹಿಸಿ ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷರುಗಳಾದ ಸಂಜೀವ ಕುಲ್ಲಾಜೆ, ಎಲ್ಯಣ್ಣ ಮಲೆಕುಡಿಯ ಅಂದಿನ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಲಂಗಾರು , ವಸಂತಿ ಕುತ್ಲೂರು, ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀಧರ್ ಗೌಡ ಈದು ಮೊದಲಾದವರ ನೇತೃತ್ವದಲ್ಲಿ ಕೇಮಾರು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೃಹತ್ ಹೋರಾಟವನ್ನು ಮಾಡಲಾಗಿತ್ತು.
ಹೋರಾಟದಲ್ಲಿ ಭಾಗಿಯಾದ ಎಲ್ಲಾ ಸಮುದಾಯ ಬಾಂಧವರಿಗೆ , ತನಿಖಾಧಿಕಾರಿಗಳು ಮತ್ತು ಅಭಿಯೋಜಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ. ದೌರ್ಜನ್ಯಕ್ಕೊಳಗಾದ ಸುಂದರ ಮಲೆಕುಡಿಯರಿಗೆ ಪರಿಹಾರ ಧನವನ್ನು ಶೀಘ್ರದಲ್ಲಿ ನೀಡುವಂತೆ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ರವರು ಆಗ್ರಹಿಸಿದ್ದಾರೆ.