ಕಲ್ಮಂಜ : ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಮಂಜ ಶಾಲಾ ಶತಮಾನೋತ್ಸವ ಸಮಿತಿ ಅಂಗವಾಗಿ ಬೆನಕ ಹೆಲ್ತ್ ಸೆಂಟರ್, ಉಜಿರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ ಇವರ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ.23ರಂದು ಬೆಳಿಗ್ಗೆ ಗಂಟೆ 9-30ರಿಂದ 1-30ರವರೆಗೆ ಕಲ್ಮಂಜ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಬೆನಕ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕರು ಡಾ| ಗೋಪಾಲಕೃಷ್ಣ ಕೆ. ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನುಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಮಲ ವಹಿಸಲಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳುವ ತಜ್ಞ ವೈದ್ಯರು: ಶಸ್ತ್ರಚಿಕಿತ್ಸಾ ತಜ್ಞರು – ಡಾ| ವಿಜೇತ್ ರೈ, ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರು- ಡಾ| ಆದಿತ್ಯ ರಾವ್, (ಫಿಸಿಶಿಯನ್), ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು -ಡಾ| ಅಂಕಿತಾ ಜಿ ಭಟ್, ಎಲುಬು ಕೀಲು ತಜ್ಞರು- ಡಾ| ರೋಹಿತ್ ಜಿ. ಭಟ್, ಮಕ್ಕಳ ತಜ್ಞರು ಡಾ| ಶಂತನು ಪ್ರಭು,
ಶಿಬಿರದ ವಿಶೇಷತೆ : ಉಚಿತ ಇ. ಸಿ. ಜಿ., ರಕ್ತದೊತ್ತಡ, ಮಧುಮೇಹ ತಪಾಸಣೆ, ಔಷಧ ವಿತರಣೆ.