
ಕಾಕ೯ಳ: ಕಾರ್ಕಳ ಸ್ವರಾಜ್ ಮೈದಾನದಲ್ಲಿ ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.22ರಂದು ನಡೆಯಿತು.
ಹಿರಿಯ ಮೋಟಾರ್ ವಾಹನ ನೀರಿಕ್ಷಕರು ಸಂತೋಷ ಶೆಟ್ಟಿ ಪಂದ್ಯಾಟ ಉದ್ಘಾಟನೆ ಮಾಡಿದರು. ನೇಮಿರಾಜ್ ಅರಿಗ, ಶಿವರಾಮ್ ಹೆಗ್ಡೆ, ಗೋಪಾಲ್ ಪೈ, ಅಂಬಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ನೇಮಿರಾಜ್ ಅರಿಗ ವಹಿಸಿದರು ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಿಕರಾದ ಶಯ ಸಂತೋಷ ಶೆಟ್ಟಿ, ಸಿಬಂದಿಗಳಾದ ರಾಜೇಶ್ ಶೇಟ್, ಶಾಂತರಾಜ್, ಅಮರ್, ಶಯ ಶುದಂಷು, ರಕ್ಷಿತ್, ಉಪಸ್ಥಿತರಿದ್ದರು. ಹಾಗೂ ಶಿವರಾಮ್ ಹೆಗ್ಡೆ, ರಮೇಶ್ ದೇವಾಡಿಗ, ಗೋಪಾಲ್ ಪೈ ಉಪಸ್ಥಿತರಿದ್ದರು. ನೇಮಿರಾಜ್ ಮಾತಾಡಿ ಈ ತರಹದ ಪಂದ್ಯಾಟ ದಿಂದ ಕೆಲಸದ ಒತ್ತಡ ಕಡಿಮೆ ಆಗುತದೆ. ಆದುದರಿಂದ ವರ್ಷ ದಲ್ಲಿ ಎರಡು ಮೂರು ಮ್ಯಾಚ್ ಮಾಡುವಂತೆ ಹೇಳಿದರು. ಉಡುಪಿ ತಂಡವು ಪ್ರಥಮ, ಕಾರ್ಕಳ ತಂಡವು ದ್ವಿತೀಯ, ಹಾಗೂ ಕುಂದಾಪುರ ತಂಡವು ತೃತೀಯ ಬಹುಮಾನ ಪಡೆಯಿತು. ಆಡಿದ ಎಲ್ಲಾ ತಂಡದ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಯಿತು. ರವಿ ಅಲೆಯೂರು ಕಾರ್ಯಕ್ರಮ ನಿರೂಪಿದರು. ಅಂಬಾ ಪ್ರಸಾದ್ ಸ್ವಾಗತಿಸಿದರು ಹಾಗೂ ಧನ್ಯವಾದ ಅರ್ಪಿದರು.