ಬೆಳ್ತಂಗಡಿ: ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವು ಫೆ.೨೧ ಹಾಗೂ ೨೨ರಂದು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸುವ ಈ ಕೂಟವು ಉತ್ಸಾಹಭರಿತ ಸ್ಪರ್ಧೆಗಳು ಮತ್ತು ಉತ್ಸಾಹಭರಿತ ಪ್ರೇಕ್ಷಕರೊಂದಿಗೆ ಸಡಗರಪೂರ್ಣವಾಗಿ ಮುಕ್ತಾಯಗೊಂಡಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಖ್ಯಾತ ದಂತ ವೈದ್ಯ ಡಾ| ಸೂರಜ್ ಉಜಿರೆ ನೆರವೇರಿಸಿ ಮಾತನಾಡಿ ಅವರು ಕ್ರೀಡೆ ಮತ್ತು ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, “ಕಲಿಕೆಯು ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲ, ಕ್ರೀಡೆಯೂ ಕಲಿಕೆಯ ಒಂದು ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯು ಕೇವಲ ಸ್ಪರ್ಧೆಗಳಿಗಾಗಿ ಮಾತ್ರವಲ್ಲ, ಅವು ಶಿಸ್ತು, ಒಗ್ಗಟ್ಟನ್ನು ಬೆಳೆಸುತ್ತವೆ” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಎಂ. ಮಲ್ಲಿಕಾರ್ಜುನ ಗೌಡ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವವನ್ನು ತಿಳಿಸಿದರು.
ಪ್ರಸನ್ನ ಸಿ.ಬಿ.ಎಸ್.ಸಿ ಶಾಲಾ ಮುಖ್ಯೋಪಾಧ್ಯಾಯ ಕೆ.ಎಸ್.ಎನ್ ಭಟ್ ಹಾಗೂ ಪ್ರಸನ್ನ ಕೈಗಾರಿಕಾ ತರಬೇತಿ ವಿದ್ಯಾಲಯದ ಪ್ರಾಂಶುಪಾಲ ಅಖಿಲೇಶ್ ಕುಮಾರ್ ರವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಪ್ರಾಧ್ಯಾಪಕಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಎರಡೂ ದಿನಗಳೂ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜಿಸಲಾಗಿತ್ತು.