ಅಂಡಿಂಜೆ: ಅಂಡಿಂಜೆ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ನಿತಿನ್ ರವರ ಅಧ್ಯಕ್ಷತೆಯಲ್ಲಿ ಫೆ.24ರಂದು ಜರುಗಿತು. ಮಾರ್ಗದರ್ಶಕ ಅಧಿಕಾರಿಯಾಗಿ ಮುಖ್ಯ ಪಶುವೈದ್ಯಾಧಿಕಾರಿ ಡಾ. ವಿನಯ್ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.
ವೇಣೂರು ಮತ್ತು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರುಗಳ ನೇಮಕ ಆಗಬೇಕು. 24×7 ಸೇವೆ ನಡೆಯಬೇಕು. 30 ವರ್ಷಗಳ ಹಿಂದಿನ ವ್ಯವಸ್ಥೆಗಳು ಇಂದು ಕುಂಟಿತಗೊಂಡಿದೆ. 30 ವರ್ಷದ ಹಿಂದೆ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಳು ನಡೆಯುತ್ತಿತ್ತು ಆದರೆ ಇಂದು ರೋಗಿಗಳು ಹೋಗುವುದೇ ಕಡಿಮೆ ಆಗಿದೆ ಗ್ರಾಮಸ್ಥರು ಹೇಳಿದರು.
ಪಂಚಾಯತ್ ವತಿಯಿಂದ 7 ಅಂಗನವಾಡಿ ಕೇಂದ್ರಗಳಿಗೆ ಆಟೋಪಕರಣಗಳನ್ನು ಹಾಗೂ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕು. ಪ್ರಜ್ಞಾ ರವರನ್ನು ಗೌರವಿಸಲಾಯಿತು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಪಂಚಾಯತ್ ಸದಸ್ಯರುಗಳಾದ ರಂಜಿತ್, ಪರಮೇಶ್, ಶ್ರೀಮತಿ ಸೌಮ್ಯ, ಜಗದೀಶ್ ಹೆಗ್ಡೆ, ಶ್ರೀಮತಿ ಜಯಂತಿ, ಶ್ರೀಮತಿ ಶೋಭಾ ನಾಯ್ಕ, ಹರೀಶ್ ಹೆಗ್ಡೆ, ಶ್ರೀಮತಿ ಸರೋಜ, ಶ್ರೀಮತಿ ಸುಜಾತ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಹೆಗ್ಡೆ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಅನುಪಾಲನ ವರದಿ ವಾಚಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಶ್ರೀಮತಿ ಮಮತಾ ವಂದಿಸಿದರು.