ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ)ನಲ್ಲಿ ಮಾನವೀಯತೆ ವಿಭಾಗ ಸಂಘಟಿಸಿದ “ಕಲರವ” ಕಲೆಯ ಸೌಂದರ್ಯವನ್ನು ಆಚರಿಸುವ- 2025ರ ಒಂದು ದಿನದ ಇಂಟರ್ ಕಾಲೇಜಿಯೇಟ್ ಮತ್ತು ಇಂಟರ್ ಕ್ಲಾಸ್ ಫೆಸ್ಟ್ ಕಾರ್ಯಕ್ರಮ ಉದ್ಘಾಟನೆಯು ಫೆ.24ರಂದು ಉಜಿರೆ ಇಂದ್ರಪ್ರಸ್ಥ ಅಡಿಟೋರಿಯಂನಲ್ಲಿ ನಡೆಯಿತು.
ಮೂಡಬಿದ್ರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಮಂಗಳೂರು ಫಾರ್ಚೂನ್ ಪ್ರಮೋಟರ್ಸ್ ಪಾಲುದಾರರು, ಪವರ್ ಪಾಯಿಂಟ್ ಬ್ಯಾಟರಿ ಎಂ. ಡಿ. ಮಹೇಂದ್ರ ವರ್ಮಾ ಜೈನ್, ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ, ಕಲಾ ವಿಭಾಗದ ಭಾಸ್ಕರ್ ಹೆಗ್ಡೆ, ಸಂಸ್ಕೃತ ವಿಭಾಗದ ಶ್ರೀಧರ್ ಭಟ್, ವಿದ್ಯಾರ್ಥಿ ಪ್ರತಿನಿಧಿಗಳಾದ ವೀಕ್ಷ ಹಾಗೂ ಅಮೀರ್ ಉಪಸ್ಥಿತರಿದ್ದರು.
ಕಲರವ-2025ರ ಸಂಘಟನಾ ಕಾರ್ಯದರ್ಶಿ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ಸುದೀಕ್ಷಾ ಮತ್ತು ತಂಡ ಪ್ರಾರ್ಥಿಸಿದರು. ವೀಕ್ಷ ಎಸ್.ವಿ. ವಂದಿಸಿದರು.