ಮಚ್ಚಿನ: ದ.ಕ.ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್, ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆ 2024-25ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಾನಯನ ಅಭಿವೃದ್ಧಿ ಘಟಕ -2.0 ಯೋಜನೆಯಡಿ ವಾಟರ್ ಶೆಡ್ ಜಲಾನಯನ ಯಾತ್ರೆಯ ಅಭಿಯಾನ ಕಾರ್ಯಕ್ರಮ ಪ್ರಯುಕ್ತ , ಜಾಥಾ, ಬೀದಿ ನಾಟಕ, ತೆಂಗಿನಕಾಯಿ ಸಿಪ್ಪೆ ಸುಲಿಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಪ್ರತಿಜ್ಞಾವಿಧಿ ಬೋಧನೆ ಸಮಾರಂಭ, ಮಚ್ಚಿನ ಜಲಾನಯನ ಸಮಿತಿ ಆಶ್ರಯದಲ್ಲಿ ಫೆ.24ರಂದು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಬಳ್ಳಮಂಜ ಶ್ರೀ ಅನಂತೇಶ್ವರ ದೇವಾಸ್ಥಾನದ ಮುಂಭಾಗದಲ್ಲಿ ವಾಟರ್ ಶೆಡ್ ಯಾತ್ರೆಗೆ ದೇವಳದ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಾಯ ಹಸಿರು ನಿಶಾನೆ ಹಾರಿಸುವ ಮೂಲಕ ಚಾಲನೆ ನೀಡಿದರು. ಬಳ್ಳಮಂಜ ಪೇಟೆಯಲ್ಲಿ ಸೇರ್ಕೆಡ್ ಹಾರ್ಟ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಚ್ಚಿನ ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಪುತ್ತೂರು ಉಪ ವಿಭಾಗದ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ಸೋಮವಾತಿ, ಸದಸ್ಯರಾದ ಪ್ರಮೋದ್ ಕುಮಾರ್, ಚಂದ್ರಕಾಂತ ನಿಡ್ಡಾಜೆ, ಚಂದ್ರಶೇಖರ್ ಬಿ.ಎಸ್., ರವಿಚಂದ್ರ, ವಿಶ್ವರಾಜ್, ರಮ್ಯಾಶ್ರೀ , ತಾರ, ಡೀಕಮ್ಮ, ಜಯಶ್ರೀ ಹಾಗೂ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖರಾದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಗಂಗಧಾರ್, ನಾರಾಯಣ ಪೂಜಾರಿ ಮಚ್ಚಿನ, ಸಂಜೀವ, ಸುಧೀರ್ ಶೆಟ್ಟಿ ಕೊರಬೆಟ್ಟು, ಮಡಂತ್ಯಾರು ಸೇರ್ಕೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ಕೃಷಿ ಇಲಾಖೆಯ ಸಿಬ್ಬಂದಿಗಳಾದ ಕೃಷ್ಣ ಕುಮಾರ್, ಶಿವರಾಜ್ , ಜಯಂತ್, ಪುಷ್ಪಾ, ನಿಶಾ, ಮೋಕ್ಷಿತಾ, ನವನೀತಾ, ಅಭಿಲಾಷ್, ಸತೀಶ್ ಹಾಗೂ ಸಂತೋಷ್, ಪಿಡಿಓ ಗೌರಿ ಶಂಕರ್, ಗ್ರಾ.ಪಂ.ಸದಸ್ಯ ದಿನೇಶ್, ಗ್ರಾ.ಪಂ.ಸಿಬ್ಬಂದಿಗಳಾದ ಸಚಿನ್, ಕವಿತಾ, ಗುಣವಾತಿ, ನಿಶಾ ಹಾಗೂ ಶ್ವೇತಾ, ಭವ್ಯಾ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಮಚ್ಚಿನ ಮೋರರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಸಹಾಯಕ ಕೃಷಿ ನಿರ್ದೇಶಕ ವಿರಭದ್ರಪ್ಪ ಎ.ಡಿ. ಸ್ವಾಗತಿಸಿ, ಕೃಷಿ ಅಧಿಕಾರಿ ಗಣೇಶ್ ವಂದಿಸಿ, ಮಂಜುಳಾ ಶರ್ಮ ನಿರೂಪಿಸಿದರು.