ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ ಜ. 8ರಂದು ನಡೆದು ಅಂದೇ ಮತ ಎಣಿಕೆ ನಡೆದಿದ್ದು ಒಟ್ಟು 12 ಸ್ಥಾನಗಳಲ್ಲಿ 11ರಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 1 ಸ್ಥಾನದಲ್ಲಿ ಸೌಹಾರ್ದ ಸಹಕಾರಿ ಸಂಘದ ಅಭ್ಯರ್ಥಿ ಧರ್ಮರಾಜ್ ಗೌಡ ಅಡ್ಕಡಿ ಜಯಗಳಿಸಿದ್ದು ಚುನಾವಣೆ ಫಲಿತಾಂಶ ಕೋರ್ಟ್ ನಲ್ಲಿ ಇದ್ದ ಕಾರಣ ಫಲಿತಾಂಶ ಘೋಷಣೆ ತಡೆ ಹಿಡಿಯಲಾಗಿತ್ತು. ಇದೀಗ ಫಲಿತಾಂಶವನ್ನು ಕೋರ್ಟ್ ಪ್ರಕಟಿಸಿದ್ದು ಫೆ.25ರಂದು ನಡೆದ ಸಹಕಾರಿ ಭಾರತಿ ಕೋರ್ ಕಮಿಟಿ ಸಭೆಯಲ್ಲಿ ಅಧ್ಯಕ್ಷರಾಗಿ ರಾಘವೇಂದ್ರ ನಾಯಕ್, ಉಪಾಧ್ಯಕ್ಷರಾಗಿ ರಾಜು ಕೆ. ಸಾಲಿಯಾನ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಕೊರಗಪ್ಪ ಗೌಡ, ರತೀಶ್ ಬಿ, ವರದಶಂಕರ ದಾಮ್ಲೆ, ಧರ್ಮರಾಜ್ ಎ, ಶ್ರೀಮತಿ ಗಂಗಾವತಿ, ಶ್ರೀಮತಿ ತಾರಾ, ಶ್ರೀಮತಿ ಬೇಬಿ, ನಾಗೇಶ್ ಟಿ. ಬೇಬಿ ಕಿರಣ್, ಕೃಷ್ಣಪ್ಪ ಗೌಡ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಪ್ರತಿಮಾ ಬಿ ಕಾರ್ಯನಿರ್ವಹಿಸಿದರು.