31.4 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಕುರಿತು ಉಪನ್ಯಾಸ

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ತಾಲೂಕು ಘಟಕದ ನೇತೃತ್ವದಲ್ಲಿ
ಅಹಲ್ಯ ಬಾಯಿ ಹೋಳ್ಕರ್ – ಜೀವನಗಾಥೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಭವ್ಯಾ ಮಾತನಾಡಿ “ಪತಿಯ ಮರಣ ಮೃದಂಗದೊಡನೆ ಕಾರ್ಮೋಡ ಕವಿದರೂ, ತನ್ನವರ ಅಗಲುವಿಕೆಯ ಬಿಸಿಯ ಶಾಖವಿದ್ದರೂ, ವಿರಕ್ತಿಯ ಬೇಗೆಯಲ್ಲಿ ಬೆಂದು ನೊಂದು ಭಾವ ಬರಿದಾದರೂ ಎದೆಗುಂದದೆ ದಿಟ್ಟತನದಿಂದ ಸುಂಟರಗಾಳಿಯಂತೆ ರಾಜ್ಯೋದ್ಧಾರದ ಕಡೆಗೆ, ಪ್ರಜೆಗಳ ಹಿತ ದೃಷ್ಟಿಯಿಂದ ಎದ್ದು ನಿಂತವಳು ಅಹಲ್ಯಾ ಬಾಯಿ ಹೋಳ್ಕರ್. ಜನರ ಒಳಿತಿಗಾಗಿ ಜನಜನಿತರಾದ ಅಹಲ್ಯಾಬಾಯಿ ಎಂಬ ಅರುಂಧತಿ ನಕ್ಷತ್ರ ಭಾರತೀಯ ಚರಿತೆಯ ನಂದಾದೀಪ”ಎಂದರು.


ಮಹಿಳಾ ಪ್ರಕಾರ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅ.ಭಾ.ಸ.ಪ ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ,ವಿಭಾಗ ಸoಯೋಜಕ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕಾರಿಣಿ ಸದಸ್ಯ ಗುರುನಾಥ್ ಪ್ರಭು, ಸಮಿತಿಯ ಸಹ ಕಾರ್ಯದರ್ಶಿ ಸಂತೋಷಿನಿ, ಘಟಕದ ಸಹಕಾರ್ಯದರ್ಶಿ ವನಜಾ ಜೋಷಿ,ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.


ತಾಲೂಕು ಸಮಿತಿಯ ಕಾರ್ಯದರ್ಶಿ ಸುಭಾಷಿಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ವಿನುತಾ ರಜತ್ ಗೌಡ ಸ್ವಾಗತಿಸಿದರು.ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ತಾಲೂಕು ಸಮಿತಿಯ ಸಾಹಿತ್ಯ ಕೂಟ್ ಪ್ರಮುಖ್ ಅಶ್ವಿಜಾ ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬೆಳ್ತಂಗಡಿ ಮಾದರಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ಎಂಟರ್ಪ್ರಿನಾರ್ಶಿಪ್ ಡೆವಲಪ್ಮೆಂಟ್ ಸೆಲ್ಲ್ ವಿಭಾಗದ ವತಿಯಿಂದ ಪ್ರೋಡಕ್ಟ್ ಲಾಂಚ್

Suddi Udaya

ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ಬಾಲಕಿಯರ ತಂಡಕ್ಕೆ ಬೆಳ್ಳಿ ಪದಕ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ದಸರಾ ಕ್ರೀಡಾಕೂಟದ ಯೋಗಾಸನ ಸ್ಪರ್ಧೆಯಲ್ಲಿ ವಾಣಿ ಕಾಲೇಜಿನ ಮೋಹಿತ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮೇ 3 -12: ಕಾಜೂರು ಉರೂಸ್ ಮಹಾಸಂಭ್ರಮ: ಮೇ 12 ರಂದು ಸರ್ವಧರ್ಮೀಯರ ಸೌಹಾರ್ದ ಸಂಗಮ- ಉರೂಸ್ ಸಮಾರೋಪ

Suddi Udaya
error: Content is protected !!