25.8 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ವೈಎಸ್ ಬೆಳ್ತಂಗಡಿ ಝೋನ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಬೆಳ್ತಂಗಡಿ : ಎಸ್ ವೈ ಎಸ್ ಬೆಳ್ತಂಗಡಿ ಝೋನ್ ಇದರ ವಾರ್ಷಿಕ ಮಹಾಸಭೆಯು ಫೆ.23ರಂದು ಎಚ್ ಎಮ್ ಮದರಸಹಾಲ್ ಜಾರಿಗೆ ಬೈಲ್ ನಲ್ಲಿ ನಡೆಸಲಾಯಿತು.

ಝೋನ್ ಅಧ್ಯಕ್ಷ ಕಾಸಿಂ ಮುಸ್ಲಿಯರ್ ಮಾಚಾರು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರಿಸ್ ಯಾಸೀನ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಕೆವೈ ಹಂಝ ಮದನಿ ಅಲ್ ಫುರ್ಖಾನಿ ಗುರುವಾಯನಕೆರೆ ದುಃಆ ಆಶೀರ್ವಚನ ಮಾಡಿದರು. ಎಸ್ ವೈ ಎಸ್ ಝೋನ್ ಕಾರ್ಯದರ್ಶಿ ನಝೀರ್ ಪೆರ್ದಾಡಿ ವರದಿ ವಾಚಿಸಿದರು ಕಳೆದ ಎರಡು ವರ್ಷದ ಅವಧಿಯ ಲೆಕ್ಕ ಪತ್ರ ಕೋಶಾಧಿಕಾರಿ ಹಾರಿಸ್ ಕುಕ್ಕುಡಿ ಮಂಡಿಸಿದರು. ಜಿಲ್ಲೆಯಿಂದ ಆಗಮಿಸಿದ ನಾಯಕರಗಳಾದ ಶಾಫಿ ಸಖಾಫಿ ಕೊಕ್ಕಡ ತರಗತಿ ಮಂಡಿಸಿ, ಕಲಂದರ್ ಪದ್ಮಂಜ ರವರು ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸಾಧಿಕ್ ಮಾಸ್ಟರ್ ಮಲೆಬೆಟ್ಟು ಆಶಂಶ ಮಾತುಗಳನ್ನಾಡಿದರು.

ಎಸ್ ವೈ ಎಸ್ ಬೆಳ್ತಂಗಡಿ ಝೋನ್ ಇದರ 2025 26ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಕನ್ಯಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಝಖ್ ಸಖಾಫಿ ಮಡಂತ್ಯಾರು, ದಅವಾ ಮತ್ತು ಟ್ರೈನಿಂಗ್ ಉಪಾಧ್ಯಕ್ಷರಾಗಿ ಅಯ್ಯೂಬ್ ಮಹ್ಳರೀ ಕಾವಳಕಟ್ಟೆ, ಕಾರ್ಯದರ್ಶಿಯಾಗಿ ಆಶ್ರಫ್ ಮುಂಡಾಜೆ, ಸೋಶಿಯಲ್ ಮತ್ತು ಕಲ್ಚರಲ್ ಕಾರ್ಯದರ್ಶಿಯಾಗಿ ಸಿದ್ದೀಕ್ ಪರಪ್ಪು, ಸಾಂತ್ವನ ಮತ್ತು ಇಸಾಬ ಉಪಾಧ್ಯಕ್ಷರಾಗಿ ಕೆ ವೈ ಇಸ್ಮಾಯಿಲ್ ವೇಣೂರು, ಕಾರ್ಯದರ್ಶಿಯಾಗಿ ಅಝೀಝ್ ಕಾಜೂರು, ಸಂಘಟನಾ ಉಪಾಧ್ಯಕ್ಷರಾಗಿ ಜಮಾಲುದ್ದೀನ್ ಲತೀಫಿ ಲಾಡಿ, ಕಾರ್ಯದರ್ಶಿಯಾಗಿ ಅಶ್ರಫ್ ಎಂ ಎಚ್ ಉಜಿರೆ,ಮೀಡಿಯಾ ಮತ್ತು ಐಟಿ ಕಾರ್ಯದರ್ಶಿಯಾಗಿ ಹಾರಿಸ್ ಕುಕ್ಕುಡಿ ಇವರುಗಳನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಏಳು ಸರ್ಕಲ್ ಸಮಿತಿಯ ಕೌನ್ಸಿಲರ್ ಗಳು ಭಾಗವಹಿಸಿದ್ದರು ಮಹಾಸಭೆಗೆ ಹಾಜರಾದ ಸರ್ವರಿಗೂ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಖ್ ಸಖಾಫಿ ಮಡಂತ್ಯಾರು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ವಂದಿಸಿದರು.

Related posts

ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ: ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ವೇಣೂರು ಮಹಾಮಸ್ತಕಾಭಿಷೇಕಕ್ಕೆ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಆಹ್ವಾನ ಪತ್ರಿಕೆ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ನಡ ಗ್ರಾ.ಪಂ. ನ ಅಧ್ಯಕ್ಷರಾಗಿ ಮಂಜುಳಾ, ಉಪಾಧ್ಯಕ್ಷರಾಗಿ ದಿವಾಕರ ಪೂಜಾರಿ ಆಯ್ಕೆ

Suddi Udaya

ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಬೆಳ್ತಂಗಡಿ ಪೊಲೀಸರ ದಾಳಿ: ಇಬ್ಬರು ಆರೋಪಿಗಳು ಪೊಲೀಸರ ವಶ

Suddi Udaya

ಕಕ್ಕಿಂಜೆ: ರಮ್ಯ ಡ್ರೆಸ್ಸಸ್ ನಲ್ಲಿ ಶೇ. 10-30 ಡಿಸ್ಕೌಂಟ್ ಸೇಲ್

Suddi Udaya
error: Content is protected !!