February 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ನಡ ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

ನಡ ಗ್ರಾಮ ಪಂಚಾಯತ್ 2024-25ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯು ಫೆ. 18 ರಂದು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಹಾಗೂ 2024-25ನೇ ಸಾಲಿನ ವಿಕಲಚೇತನರ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಶಬೀನಾ ಬಾನು ಇವರಿಗೆ ಆರೋಗ್ಯ ಸಮಸ್ಯೆ ಇದ್ದಕಾರಣ ಪಂಚಾಯತ್ ನ ನರೇಗಾ ಸಿಬ್ಬಂದಿಯಾದ ಮೀನಾಕ್ಷಿ ಇವರು ವಾಚಿಸಿದರು.


ವಿಕಲಚೇತನರಿಗೆ ಸಿಗುವ ಸರಕಾರದ ಸೌಲಭ್ಯದ ಸಮಗ್ರ ಮಾಹಿತಿಯನ್ನು ಮಾಹಿತಿ ಸಂಪನ್ಮೂಲ ವ್ಯಕ್ತಿಯಾಗಿ ಇಂದಬೆಟ್ಟು ಗ್ರಾಮದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರಾದ ಜೋಸೆಫ್ ಇವರು ನೀಡಿದರು.ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತಿಯಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಪ್ರಸಕ್ತ ಸಾಲಿನಲ್ಲಿ ವಿಕಲಚೇತನರಿಗೆ ವೈದ್ಯಕೀಯ ವೆಚ್ಚದ ಸಹಾಯಧನದ ಚೆಕ್ಕನ್ನು ವೇದಿಕೆಯಲ್ಲಿರುವ ಗಣ್ಯರಿಂದ ಹಸ್ತಂತರಿಸಲಾಯಿತು. ವಿಶೇಷಚೇತನರು ಸಮಾಜವನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿಯನ್ನು ನಗರ ಪುನರ್ವಸತಿ ಕಾರ್ಯಕರ್ತೆಯಾದ ಕುಮಾರಿ ಫೌಝಿಯಾ ಇವರು ಸವಿವಾರವಾಗಿ ತಿಳಿಸಿದರು ಹಾಗೂ ತಾಲೂಕಿನ ಆರೋಗ್ಯ ನಿರೀಕ್ಷಿಣಾಧಿಕಾರಿಯಾದ ರಕ್ಷಿತ್ ಎಂಡೋಸಲ್ಫಾನ್ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಎಂಡೋ ಫಲಾನುಭವಿಗಳಿಗೆ ಬಂದಂತಹ ಎಂಡೋ ಕಾರ್ಡ್ ನ್ನು ವಿತರಿಸಲಾಯಿತು.


ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ ಹೆಚ್ ಒ ಮತ್ತು ಆಶಾ ಕಾರ್ಯಕರ್ತರು ಸೇರಿ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ನಡೆಸಲಾಯಿತು. ಪಂಚಾಯತ್ ನ ಅಧ್ಯಕ್ಷರು ವಿಶೇಷಚೇತನರಿಗೆ ಹಿತನುಡಿಯನ್ನು ತಿಳಿಸಿದರು. ಸಭೆಯನ್ನು ಪಂಚಾಯತ್ ನ ನರೇಗಾ ಸಿಬ್ಬಂದಿ ಯಾದ ಮೀನಾಕ್ಷಿ ನಿರೂಪಿಸಿ, ಪಂಚಾಯತ್ ಕಾರ್ಯದರ್ಶಿ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿಯಾದ ದಿವಾಕರ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ಆಶಾ ಕಾರ್ಯಕರ್ತರು, ಸಂಜೀವಿನಿ ಸಂಘದ ಎಮ್ ಬಿ ಕೆ ಯವರು, ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

Related posts

ಮಿತ್ತ ಬಾಗಿಲು ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಸಾಧನಾ ಪ್ರಶಸ್ತಿ,

Suddi Udaya

ಇಂದಬೆಟ್ಟು ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಲಯ ಸಭೆ

Suddi Udaya

ಪಟ್ರಮೆ: ಶ್ರೀಮತಿ ಮಂಜುಳಾ ನಿಧನ

Suddi Udaya

ಲಾಯಿಲ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಧರ್ಮಸ್ಥಳ: ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!