April 21, 2025
Uncategorized

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಹರಕೆ ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡುವಂತೆ ಪ್ರಶಾಂತ್ ಪೂವಾಜೆಯವರು ಧಾರ್ಮಿಕ ದತ್ತಿ ಆಯುಕ್ತರು ಬೆಂಗಳೂರು ಇವರಿಗೆ ಸಲ್ಲಿಸಿರುವ ಮನವಿಯನ್ನು ಉಲ್ಲೇಖಿಸಿ, ಈ ಬಗ್ಗೆ ತನಿಖೆ ನಡೆಸಿ, ವಿವರವಾದ ವರದಿ ಸಲ್ಲಿಸುವಂತೆ ದ.ಕ ಜಿಲ್ಲಾಧಿಕಾರಿಗಳು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.


ಪ್ರಶಾಂತ್ ಪೂವಾಜೆಯವರು ತಮ್ಮ ಮನವಿಯಲ್ಲಿ ಸದ್ರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಹೆಚ್ಚು ಆದಾಯ ಬರುವ ದೇವಾಲಯವಾಗಿದ್ದು, ರಾಜ್ಯದಲ್ಲಿ ೧೨ನೇ ಸ್ಥಾನದಲ್ಲಿದ್ದು, ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಬಯಲು ಆಲಯ ಗಣಪತಿ ಗಂಟೆ ಗಣಪತಿ ಎಂದೇ ಪ್ರಸಿದ್ದಿ ಪಡೆದ ಈ ದೇಗುಲದಲ್ಲಿ ಸರಿ ಸುಮಾರು ಐದು ವರ್ಷಗಳ ಹಿಂದೆ 2019-2020 ನೇ ಸಾಲಿನಲ್ಲಿ ಹಗರಣವಾಗಿ ತನಿಖೆಯಾದ ಹರಕೆ ಗಂಟೆಗಳನ್ನು ಮಾಡುವುದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾ ವರದಿಯೊಂದಿಗೆ ಇರುವ ಅನುಬಂಧ ಪ್ರತಿಯಲ್ಲಿ ಹಗರಣದ ಸಂದರ್ಭದಲ್ಲಿ ಇದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಹಸ್ತಕ್ಷೇಪ ಇರುವುದು ಮೇಲ್ನೋಟಕ್ಕೆ ತನಿಖಾ ವರದಿಯಲ್ಲಿ ಕಂಡುಬರುತ್ತಿದೆ ಹಾಗೂ ಇನ್ನೋರ್ವ ಸಮಿತಿ ಸದಸ್ಯರಾಗಿದ್ದ ಕೆ. ವಿಶ್ವನಾಥ ಕೊಲ್ಲಾಜೆ ಇದರ ಹೇಳಿಕೆಯಂತೆ ಸುಮಾರು ೨೦ ವರ್ಷಗಳ ಹಿಂದೆ (೨೦೦೪ ರಲ್ಲಿ) ದೇವಸ್ಥಾನದ ಹುಂಡಿಯಿಂದ ಹಣ ಪಡೆದು ಸ್ವಂತ ಆಸ್ತಿಯ ಸಾಲ ಮರುಪಾವತಿ ಮಾಡಿರುವುದಾಗಿ ನೀಡಿದ ಪತ್ರಿಕಾ ಹೇಳಿಕೆ ಸಂಶಯವನ್ನು ಉಂಟು ಮಾಡಿದೆ ಎಂದೂ, ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ದೇಗುಲದ ಭಕ್ತರ ನಂಬಿಕೆಗೆ ಘಾಸಿ ಹಾಗೂ ಅನುಮಾನ ಉಂಟುಮಾಡುವಂತಿದೆ ಎಂದೂ, ಪ್ರಸಕ್ತ ಸಾಲಿನ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ ಸುಬ್ರಹ್ಮಣ್ಯ ಶಬರಾಯ, ಕೆ. ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ ಪಿ. ಪ್ರಶಾಂತ ರೈ ಮತ್ತು ಶ್ರೀಮತಿ ಸಿನಿ ಇವರು ಈಗಾಗಲೇ ಗಂಟೆ ಹಗರಣದ ಸಮಯದಲ್ಲಿ ಸಮಿತಿಯ ಸದಸ್ಯರಾಗಿದ್ದು ದತ್ತಿ ಕಾಯ್ದೆ ನಿಯಮ ಉಲ್ಲಂಘನೆಯನ್ನು ಮಾಡಿರುವ ಅನೇಕ ನಿರ್ಣಯಗಳು ಮಾಡಿರುವ ಇವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಬಾರದೆಂದೂ, ಗಂಟೆ ಅವ್ಯವಹಾರ ಹಾಗೂ ಭಕ್ತರ ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡಿಸಿ ದೇಗುಲಕ್ಕೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದರು. ಸದ್ರಿ ಮನವಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.

Related posts

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಕಾಳಜಿಯ ಯಶಸ್ವೀ ಪ್ರಯೋಗಗಳು

Suddi Udaya

ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ

Suddi Udaya

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡ ಉದ್ಘಾಟನೆ

Suddi Udaya

ಹಿಂದೂ ಕಾಯ೯ಕತ೯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ತಂಗಡಿಯ ನೌಷದ್ ಪತ್ತೆಗೆ ಎನ್.ಐ.ಎ ರೂ. 2 ಲಕ್ಷ ಬಹುಮಾನ ಘೋಷಣೆ

Suddi Udaya

ಬಂದಾರು ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya
error: Content is protected !!