ಕುವೆಟ್ಟು ಗ್ರಾಮ ಪಂಚಾಯತ್ ರ24-25 ನೇ ಸಾಲಿನ ವಿಶೇಷ ಚೇತನರ ವಿಶೇಷ ಗ್ರಾಮ ಸಭೆಯು ಫೆ.26ರಂದು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತ್ ಬಿಲ್ ಕಲೆಕ್ಟರ್ ಆನಂದ ಕೋಟ್ಯಾನ್ ಸ್ವಾಗತ ಮಾಡಿ ನೀಡಿದರು. ತಾಲೂಕು ಪಂಚಾಯತ್ ವಿವಿದೊದ್ದೇಶ ಸಂಯೋಜಕರಾದ ಜಾನ್ ಬ್ಯಾಪ್ಸಿಟ್ ಡಿಸೋಜ ಇವರು ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ ದ ಕುರಿತು ಸಮಗ್ರ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇತ್ತಿಯಾಜ್ ಇವರು ಪಂಚಾಯತ್ ನಿಂದ ನೀಡುವ ಸೌಲಭ್ಯದ ಬಗ್ಗೆ ಮಾಹಿತಿ ಪ್ರಾಸ್ತವಿಕ ಮಾತನಾಡಿದರು.
ಕುವೆಟ್ಟು ಗ್ರಾಮ ಪಂಚಾಯತಿಯ ವಿ ಆರ್ ಡಬ್ಲ್ಯೂ ಸುಲೋಚನ ವಿ ವರದಿ ವಾಚಿಸಿದರು. ಪಂಚಾಯತ್ಅಧ್ಯಕ್ಷೆ ಭಾರತಿ ಎಸ್. ಶೆಟ್ಚಿ ಯವರು ವಿಶೇಷಚೇತನರಿಗೆ 5% ಪಂಚಾಯತ್ ಅನುದಾನದ 29 – ಮಂದಿ ವಿಶೇಷ ಚೇತನರಿಗೆ ಚೆಕ್ ವಿತರಿಸಿದರು ಮತ್ತು ಅಧ್ಯಕ್ಷರು ಪ್ರಾಸ್ತವಿಕ ವಿಶೇಷ ಚೇತರಿಗೆ ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆ ಸಿಬ್ಬಂದಿ ದಿಲೀಪ್ ಧನ್ಯವಾದವಿತ್ತರು.