
ಶಿಬಾಜೆ: ಇಲ್ಲಿಯ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.26 ರಿಂದ ಪ್ರಾರಂಭಗೊಂಡು ಫೆ.28ರವರೆಗೆ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇಂದು(ಫೆ.27) ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಗೆ ಪೂರ್ಣ ಕುಂಭ ಸ್ವಾಗತ ನೀಡಿ ನಂತರ ಶ್ರೀಮತಿ ವಿನಯಾ ಮತ್ತು ವಾಮನ ತಾಮ್ಹನ್ ಕರ್ ಅರಸಿನಮಕ್ಕಿ ಹಾಗೂ ದಿವ್ಯ ಮತ್ತು ದಿವಾಕರ ಗುಡ್ಡೆತೋಟ ಇವರಿಂದ ಶ್ರೀದೇವಿಗೆ ಆಭರಣ ಸಹಿತ ಪಲ್ಲಕ್ಕಿ ಸಮರ್ಪಿಸಿ, ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗಳು ಆರ್ಶೀವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರಿಂದ ನೂತನ ಸಭಾ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.5 ಲಕ್ಷ ನೀಡಿದರು. ಇನೋರ್ವ ಮುಖ್ಯ ಅತಿಥಿ ಕೆ.ಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಉಪಸ್ಥಿತರಿದ್ದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಕೆ.ಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ರವರನ್ನು ಸ್ವಾಮೀಜಿ ಯವರು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ವಿನಯಾ ಮತ್ತು ವಾಮನ ತಾಮ್ಹನ್ ಕರ್ ಅರಸಿನಮಕ್ಕಿ ಹಾಗೂ ದಿವ್ಯ ಮತ್ತು ದಿವಾಕರ ಗುಡ್ಡೆತೋಟ , ವ್ಯವಸ್ಥಾಪನ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಸ್ವಾಗತಿಸಿ, ಹತ್ಯಡ್ಕ ವ್ಯವಸಾಯಿಕ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ನಿರೂಪಿಸಿ, ಧನ್ಯವಾದವಿತ್ತರು.
ನಂತರ ಚಂಡಿಕಾ ಹೋಮದ ಪೂರ್ಣಹುತಿಯು ನಡೆಯಿತು.