21.5 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್‌ಡಿಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿ ತಂಡದ ಭೀಷ್ಮಾಸ್ತಮಾನ ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ

ಬೆಳ್ತಂಗಡಿ: ಬೆಂಗಳೂರಿನ ಜೈನ್ ಯುನಿವರ್ಸಿಟಿ ಯಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆ ಅಭಿನಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಭೀಷ್ಮಾಸ್ತಮಾನ ನಾಟಕ ಪ್ರಥಮ ಸ್ಥಾನ ಗಳಿಸಿದೆ.

ಸ್ಪರ್ಧೆಯು ಎರಡು ಹಂತದಲ್ಲಿ ನಡೆದಿದ್ದು, ಮೊದಲ ಸುತ್ತಿನಲ್ಲಿ 25 ಕ್ಕೂ ಅಧಿಕ ತಂಡಗಳು ಭಾಗವಹಿಸಿ, 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಭೀಷ್ಮಾಸ್ತಮಾನವು ಅತ್ಯುತ್ತಮ ನಾಟಕ ಪ್ರಶಸ್ತಿಯ ಜತೆಗೆ 9 ವೈಯಕ್ತಿಕ ಪ್ರಶಸ್ತಿಗಳ ಪೈಕಿ 6ನ್ನು ಗೆದ್ದುಕೊಂಡಿದೆ. ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ಅತ್ಯುತ್ತಮ ನಿರ್ದೇಶನ), ಶ್ರೀಕೃಷ್ಣ ಪಾತ್ರಧಾರಿ ಅಮಿತ್ ಕುಮಾರ್ (ಅತ್ಯುತ್ತಮ ನಟ), ಅರ್ಜುನ ಪಾತ್ರಧಾರಿ ಅಮೃತವರ್ಷಿಣಿ (ಅತ್ಯುತ್ತಮ ನಟಿ), ಮದನ್ ಮತ್ತು ಸುಬ್ರಹ್ಮಣ್ಯ ತಂಡ (ಅತ್ಯುತ್ತಮ ಸಂಗೀತ), ಅಶ್ವಿತ್ ಮತ್ತು ಆಯುಷ್ಮಾನ್ (ಅತ್ಯುತ್ತಮ ಬೆಳಕಿನ ವಿನ್ಯಾಸ) ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ರಂಗಸಜ್ಜಿಕೆ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.

ವ್ಯಾಸ ವಿರಚಿತ ಮಹಾಭಾರತ, ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಇತರ ಕೆಲವು ಪೌರಾಣಿಕ ಆಕರಗಳಿಂದ ಪ್ರೇರಿತಗೊಂಡಿರುವ, ಎಸ್ ಡಿಎಂ ಕಲಾ ಕೇಂದ್ರ ಪ್ರಸ್ತುತಪಡಿಸಿದ ಈ ನಾಟಕವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಕಂದ ಭಾರ್ಗವ ರಚಿಸಿದ್ದು, ಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ನೀನಾಸಂ) ನಿರ್ದೇಶಿಸಿದ್ದಾರೆ. ಅಂತಿಮ ಪದವಿ ವಿದ್ಯಾರ್ಥಿಗಳಾದ ಮದನ್ ಎಂ. ಸಂಗೀತ ನೀಡಿದ್ದು, ಸುಬ್ರಹ್ಮಣ್ಯ ಜಿ. ಭಟ್ ಪಕ್ಕವಾದ್ಯದಲ್ಲಿ ಮತ್ತು ಗೌರವಿ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದರು.

(ಧೃತರಾಷ್ಟ್ರ), ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಸೋನಾಕ್ಷಿ (ಶಿಖಂಡಿ), ತೃತೀ ಯ ಪದವಿ ವಿದ್ಯಾರ್ಥಿಗಳಾದ ರಾಜೇಶ್ (ಭೀಷ್ಮ), ಸುಜಿತ್ (ಸಂಜಯ), ಹರ್ಷ (ಧರ್ಮರಾಯ), ಉಲ್ಲೇಖ (ಬ್ರೌಪದಿ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಜ್ಯೋತಿಕ (ಸೂತ್ರಧಾರ), ನೂತನ್ (ಎಷ್ಟು), ಭೂಷಣ್ (ಭೀಮಸೇನ) ಹಾಗೂ ಕನ್ನಿಕಾ ಎಸ್. (ಗಾಂಧಾರಿ) ಮತ್ತು (ಗಂಗೆ) ಪ್ರಮುಖ ಪಾತ್ರಗಳಿಗೆ ಜೀವ ತುಂಬಿದರು. ಮೇಳದಲ್ಲಿ ದ್ವಿತೀಯ ಪದವಿ ಯ ಮಾಧವ್, ವೈಶಾಖ್, ಆದಿತ್ಯ, ಅಕ್ಷರಿ ಮತ್ತು ಕನಿಷ್ಠಾ ಪಾತ್ರ ನಿರ್ವಹಿಸಿದರು.

Related posts

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಮೊತ್ತ ವಿತರಣೆ

Suddi Udaya

ಉಜಿರೆ :ಝೆoಕಾರ ರಾಷ್ಟ್ರೀಯ ಶಿಕ್ಷಣ ಮತ್ತು ಸಾಂಸ್ಕೃತಿಕ ಫೆಸ್ಟ್ : ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ವಿದ್ಯಾರ್ಥಿ ವನಿಶ್ ಗೆ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ

Suddi Udaya

ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಮಹಾಸಭೆ

Suddi Udaya

ಪಣಕಜೆ : ಚರಂಡಿಗೆ ವಾಲಿದ ಕೆಎಸ್ಆರ್ ಟಿಸಿ ಬಸ್ಸು

Suddi Udaya

ಉತ್ತರಖಂಡ ಹರಿದ್ವಾರ ಸಾಧನಾ ಕುಠಿರದ 8 ನೇ ವಾರ್ಷಿಕೋತ್ಸವ: ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಗಂಗಾ ಆರತಿ

Suddi Udaya
error: Content is protected !!