April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವ್ಯಾಪಾರ ಮೇಳವು ಅಮೃತವರ್ಷಿಣಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಧರ್ಮಸ್ಥಳ ಬೀಡಿನ ಮ್ಯಾನೇಜರ್ ಸುರೇಂದ್ರ ಜೈನ್ ಅವರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ನಿಖರವಾದ ತೂಕ, ಲಾಭ- ನಷ್ಟದ ವಿಚಾರಗಳು ಮಕ್ಕಳ ಬುದ್ಧಿಶಕ್ತಿಯನ್ನು ಚುರುಕಾಗಿಸುವುದರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದ್ದು, ಶಾಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆ ಜೊತೆಗೆ ವ್ಯಾವಹಾರಿಕ ಜ್ಞಾನ ಲಭಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಳದ ಮಣೆಗಾರರಾದ ವಸಂತ ಭಟ್ ವಿದ್ಯಾರ್ಥಿಗಳು ತಾವು ಖರೀದಿಸುವ ವಸ್ತುಗಳ ನಿಖರವಾದ ಬೆಲೆ, ಕಾಲಕಾಲಕ್ಕೆ ಅವುಗಳಲ್ಲಾಗುವ ಏರಿಕೆ ಇಳಿಕೆಗಳ ಬಗ್ಗೆ ತಿಳಿದುಕೊಂಡು, ವ್ಯಾಪಾರಿಗಳೊಂದಿಗೆ ಚರ್ಚಿಸಿ ವ್ಯಾಪಾರದಲ್ಲಾಗುವ ಮೋಸವನ್ನು ತಡೆಯಲು ಕಲಿತುಕೊಳ್ಳಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ್ ವಹಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದ ಜೊತೆಗೆ ವ್ಯಾಪಾರ ಮೇಳದಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಹಿರಿಯ ಶಿಕ್ಷಕ ಜೋಸೆಫ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಕಾವ್ಯ ಸ್ವಾಗತಿಸಿ, ಶ್ರೀಮತಿ ಸೀಮಾರವರು ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಕೆ. ಎಂ ನಿರೂಪಿಸಿದರು.

ವಿದ್ಯಾರ್ಥಿಗಳ ಮನೆಯಲ್ಲಿ ಬೆಳೆದ ಸಾವಯವ ತರಕಾರಿಗಳು, ಹಣ್ಣುಗಳು, ವಿವಿಧ ಹೂವಿನಗಿಡಗಳು, ಹಣ್ಣಿನ ಗಿಡಗಳು, ಅಕ್ವೇರಿಯಂ, ರುಚಿಕರವಾದ ಬೀಟ್ರೂಟ್ ರೊಟ್ಟಿ, ಬಗೆಬಗೆಯ ಜ್ಯೂಸ್ ಗಳು, ರಾಜಸ್ಥಾನಿ ಆಲೂ ಚಾಟ್, ಮ್ಯಾಂಗೋ ಲಸ್ಸಿ, ಚುರುಮುರಿ, ಗ್ರಾಹಕರ ಮನಸ್ಸನ್ನು ಗೆದ್ದಿತು.

Related posts

ಸುರ್ಯ ದೇವಸ್ಥಾನದ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬಿ.ಸಿ. ರೋಡ್ ನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್: ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Suddi Udaya

ಕಲ್ಮಂಜ ಗ್ರಾಮ ಪಂಚಾಯತಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಜೀವ ಜಗತ್ತಿನ ವಿಸ್ಮಯಗಳು ‘ ಎನ್ನುವ ವಿಶೇಷ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2023-24ನೆಯ ಸಾಲಿನಲ್ಲಿ ದಾಖಲೆಯ ನೇರ ನೇಮಕಾತಿಯ ಮೂಲಕ ಉದ್ಯೋಗಾವಕಾಶ

Suddi Udaya

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya
error: Content is protected !!