21.6 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ದ.ಕ ತಾಲೂಕು ಆಡಳಿತದ ವತಿಯಿಂದ ನೀಡಲಾದ ಹಿರಿಯ ಶ್ರೇಣಿ ನ್ಯಾಯಲಯದ ಮನೋಹರ್ ಕುಮಾರ್ ಅವರ ಸರ್ಕಾರಿ ಕಛೇರಿ ಉದ್ಘಾಟನೆ ಫೆ.28ರಂದು ಜರುಗಿತು.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿ ಹಿಂಭಾಗ (ಸಾಮರ್ಥ್ಯ ಸೌಧದ ಬಳಿ ) ಆರಂಭಗೊಂಡ ನೂತನ ಕಚೇರಿಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ವಿಧಾನ‌ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ,ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ತಹಿಶೀಲ್ದಾರ್ ಪೃಥ್ವಿ ಸಾನಿಕಮ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪದ್ಮನಾಭ ಮಾಲಾಡಿ, ಹಿರಿಯರಾದ ಕೃಷ್ಣಪ್ಪ ಪೂಜಾರಿ, ಜಿ.ಪಂ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಸಾಹುಲ್ ಹಮೀದ್, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಹಿರಿಯ ನ್ಯಾಯವಾದಿಗಳಾದ ಬಿ.ಕೆ ಧನಂಜಯ್ ರಾವ್, ಶಶಿಕಿರಣ್, ಎಲೋಶಿಯಸ್ ಲೋಬೋ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯವಿಕ್ರಮ್ ಕಲ್ಲಾಪು, ಚಿದಾನಂದ ಪೂಜಾರಿ ಎಲ್ದಕ್ಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಜಗದೀಶ್ ಡಿ, ಯೋಗೀಶ್ ಮೇಲಂತಬೆಟ್ಟು, ರಾಜ್ ಶೇಖರ್ ಶೆಟ್ಟಿ, ವಂದನಾ ಭಂಡಾರಿ, ಲೋಕೇಶ್ವರಿ ವಿನಯಚ್ಚಂದ್ರ, ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ, ಕೇಶವ ಬೆಳಾಲು,ನಿತೇಶ್ ಕುಕ್ಕೇಡಿ, ಸುನೀಲ್ ಶಿರ್ಲಾಲು, ಎಪಿಪಿ ದಿವ್ಯರಾಜ್, ಇಸ್ಮಾಯಿಲ್, ಇಸುಬು, ಶಿವಕುಮಾರ್, ನವೀನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅಪರ ಸರ್ಕಾರಿ ವಕೀಲರುಹಿರಿಯ ಶ್ರೇಣಿ ನ್ಯಾಯಾಲಯ ಮನೋಹರ್ ಕುಮಾರ್ ಎ ನೂತನ‌ ಸಂಸ್ಥೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಸತ್ಕರಿಸಿದರು.

Related posts

ಮೇ 22: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶ

Suddi Udaya

ಬೆಳ್ತಂಗಡಿ: ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವ

Suddi Udaya

ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ: ನಾಲ್ವರು ಯಕ್ಷಗಾನ ತರಬೇತಿ ಗುರುಗಳಿಗೆ ಗೌರವಾರ್ಪಣೆ: 8 ಶಾಲೆಗಳು 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ

Suddi Udaya

ವೇಣೂರು ನಡ್ತಿಕಲ್ಲು ನಿವಾಸಿ ಇಸ್ಮಾಯಿಲ್ ಮುಸ್ಲಿಯಾರ್ ನಿಧನ

Suddi Udaya

ಅಂತರಾಷ್ಟ್ರೀಯ ಫೋಟೋಗ್ರಾಫಿ, ವೀಡಿಯೋಗ್ರಾಫಿ ಕಾರ್ಯಾಗಾರ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya
error: Content is protected !!