September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಅಳದಂಗಡಿ:ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಾಗ್ರಿಗಳ ಅಂಗಡಿ ಶುಭಾರಂಭ

ಅಳದಂಗಡಿ: ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಗ್ರಿಗಳ ಅಂಗಡಿ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ನೇರವೇರಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ವಿಭಾಗ ಸಹ ಸಂಚಾಲಕರು ಬಜರಂಗದಳ ಮಂಗಳೂರು ಪುನೀತ್ ಅತ್ತಾವರ, ಆಟೋ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಹರೀಶ್ಚಂದ್ರ, ಅಳದಂಗಡಿ ಶ್ರೀದೇವಿ ಕಾಂಪ್ಲೆಕ್ಸ್ ಮಾಲಕ ಎನ್.ಎ ಗೋಪಾಲ್, ಯುವ ಬಿಲ್ಲವ ವೇದಿಕೆ ಶಿರ್ಲಾಲು ಇದರ ಅಧ್ಯಕ್ಷ ಹರೀಶ್ ಕಲ್ಲಾಜೆ, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರದ ಸಂಚಾಲಕ ದೇವದಾಸ್ ಸಾಲಿಯಾನ್, ತಾಲೂಕು ಸಂಚಾಲಕರು ಹಿಂದೂ ಜಾಗರಣ ವೇದಿಕೆ ಗುರುಪ್ರಸಾದ್ ನಾರಾವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಗಡಿಯಲ್ಲಿ ಎಲ್ಲಾ ತರಹದ ಪೂಜಾ ಸಾಮಗ್ರಿಗಳು, ದೈವದೇವರ ಮುಖ ಮೂರ್ತಿಗಳು ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ದೀಪಕ್ ಜಿ ತಿಳಿಸಿದರು.

ವಿಶೇಷವಾಗಿ ಸಂಸ್ಥೆಗೆ ಆಗಮಿಸಿದ ಅತಿಥಿ ಅಭ್ಯಾಗತರಿಗೆ ಸಸಿ ನೀಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಾಗ್ರಿಗಳ ಅಂಗಡಿಯ ಮಾಲಕ ದೀಪಕ್ ಜಿ ಸ್ವಾಗತಿಸಿ ಸತ್ಕರಿಸಿದರು.

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಲೋ ಅಸ್ಸಿಸ್ಟೆಂನ್ಸ್ ವಿಸಿಟ್( LAV) ಕಾರ್ಯಕ್ರಮ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಪರಿಹಾರ

Suddi Udaya

ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಾಲಯದ ಗೋಶಾಲೆಯಲ್ಲಿ ಗೋಪೂಜೆ

Suddi Udaya

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಪುತ್ತಿಲ ನಿವಾಸಿ ಸುನಂದಾರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಧನಸಹಾಯ ಹಸ್ತಾಂತರ

Suddi Udaya

ಮದ್ದಡ್ಕದಲ್ಲಿ ಸ್ಕೂಟಿ ಹಾಗೂ ಆಪೆ ರಿಕ್ಷಾ ಡಿಕ್ಕಿ

Suddi Udaya

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಹೆಚ್.ಎಸ್ ವರ್ಗಾವಣೆ

Suddi Udaya
error: Content is protected !!