ಬೆಳ್ತಂಗಡಿ: ಸುದ್ದಿ ಉದಯ ವಾರ ಪತ್ರಿಕೆಯಲ್ಲಿ ಕಳೆದ 2 ವರ್ಷಗಳಿಂದ ಚಾನೆಲ್ ವರದಿಗಾರರಾಗಿ ಸೇವೆ ಸಲ್ಲಿಸಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಸೌಮ್ಯರವರನ್ನು ಬೆಳ್ತಂಗಡಿ ಸುದ್ದಿ ಉದಯ ಬಳಗದಿಂದ ಫೆ.28ರಂದು ಬೀಳ್ಕೊಡಲಾಯಿತು.

ಈ ವೇಳೆ ಸುದ್ದಿ ಉದಯ ವಾರಪತ್ರಿಕೆಯ ಸಂಪಾದಕ ಬಿ ಎಸ್ ಕುಲಾಲ್ ರವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಹಾರೈಸಿದರು.
ಈ ಸಂದರ್ಭದಲ್ಲಿ ಸುದ್ದಿ ಉದಯ ವಾರಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ, ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಕಚೇರಿ ವ್ಯವಸ್ಥಾಪಕ ಪಿ.ತಿಮ್ಮಪ್ಪ ಗೌಡ ನಿಡ್ಲೆ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ, ಅಕೌಂಟ್ಸ್ ಮುಖ್ಯಸ್ಥೆ ಶ್ರೀಮತಿ ಸುಧಾ, ಆನ್‌ಲೈನ್ ವರದಿಗಾರ್ತಿ ಕು| ಪ್ರತಿಭಾ, ಕಂಪ್ಯೂಟರ್ ವಿಭಾಗದ ಕು| ಧನ್ಯ ಭಂಡಾರಿ, ಡಿಸೈನರ್ ಇರ್ಫಾನ್ ಉಜಿರೆ, ವರದಿಗಾರರಾದ ಸುದಿತ್ ಕುಂಜರ್ಪ, ಮನೀಷ್ ಅಂಚನ್ ಉಪಸ್ಥಿತರಿದ್ದರು.