ಬೆಳ್ತಂಗಡಿ : ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ ಹಾಗೂ ನವೀನ್ ಲೋಬೋ ಮಾಲಕತ್ವದ ಸ್ಕೈ ಎಲೆಕ್ಟ್ರಿಕಲ್ ಸೇವೆ ಹಾಗೂ ಪ್ರೈಮ್ ಅಸೋಸಿಯೇಟ್ ಅಳದಂಗಡಿ ಶಾಖೆ ಉದ್ಘಾಟನೆಯು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ಬಳಿಯ ಪಾವನಿ ಕಾಂಪ್ಲೆಕ್ಸ್ ನಲ್ಲಿ ಫೆ.28ರಂದು ನಡೆಯಿತು.

ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಸುಪಾಸಿನ ಲೈನ್ ಮೆನ್ ಗಳನ್ನು ಸನ್ಮಾನಿಸುವುದರ ಮೂಲಕ ಮಾಲಕ ಪ್ರಸನ್ನ ಹೆಗ್ಡೆ ಮಾದರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಸರಿಸುಮಾರು 20 ಮಂದಿ ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲರು, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ. ಶಶಿಧರ್ ಡೋಂಗ್ರೆ, ಯೋಗೀಶ್ ನಡಕ್ಕರ, ಅಶ್ವಿನ್ ಪಿರೇರಾ ಮೂಡುಬಿದಿರೆ, ರವಿಪ್ರಸಾದ್ ಶೆಟ್ಟಿ ಮೂಡುಬಿದಿರೆ, ಸಂದೀಪ್ ಕುಮಾರ್ ಮೆಸ್ಕಾಂ ಇಂಜಿನಿಯರ್, ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಗ್ರಾಮ ಪಂಚಾಯತ್ ಅಧಿಕಾರಿ ಪೂರ್ಣಿಮಾ ಜೆ, ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಶುಭಕೋರಿದರು.
ಆಮಂತ್ರಣ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಂಗ ಮಯ್ಯ ಸಹಕರಿಸಿದರು.