ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ ಮಾ.1ರಂದು ನಡೆಯಿತು.


ಯಕ್ಷಗಾನ ಗುರುಗಳಾದ ಲಕ್ಷ್ಮಣ ಗೌಡ ಇವರು ಮಕ್ಕಳನ್ನು ಕುರಿತು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನೀವು ಯಾವುದೇ ಉದ್ಯೋಗವನ್ನು ಹೊಂದಿರಬಹುದು ಆದರೆ ನೀವು ಕಲಿತ ಈ ಯಕ್ಷಗಾನ ವಿದ್ಯೆಯನ್ನು ಮರೆಯಬೇಡಿ. ನೀವೆಲ್ಲರೂ ಸತ್ಪ್ರಜೆಯಾಗಿ ಬಾಳಿ ಬದುಕಿ ಎಂದು ಶುಭ ಹಾರೈಸಿದರು.


ಹಿರಿಯ ಶಿಕ್ಷಕ ಜೋಸೆಫ್ ರವರು ಮಾತನಾಡಿ ಯಕ್ಷಗಾನ ಒಂದು ವಿಶೇಷ ಕಲೆ . ಎಲ್ಲಾ ಕಲೆಗಳ ಹಿರಿಯ ಕಲೆಯಾಗಿದೆ. ವಿದ್ಯಾರ್ಥಿಗಳಾದ ನೀವು ತಂದೆ ತಾಯಿ ದೇವರನ್ನು ಪ್ರೀತಿಸಬೇಕು. ಇತರರನ್ನು ಪ್ರೀತಿಸುವ ಗುಣವನ್ನು ಹೊಂದಿರಬೇಕು ಎಂದು ಹೇಳಿದರು.
ಯಕ್ಷಗಾನ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಶಿಕ್ಷಕ ಶೇಖರ್ ಗೌಡ ನಿರ್ವಹಿಸಿ, ಸಂಜೀವ ಕೆ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ವಂದಿಸಿದರು .

Related posts

ಬೆಳ್ತಂಗಡಿ: ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ರವರಿಗೆ ಕಾಂಗ್ರೆಸ್ ನಿಂದ ಭವ್ಯ ಸ್ವಾಗತ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರಿಂದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ : ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ. ಸಹಕಾರ ಸಂಘದ ರೈತ ಸದಸ್ಯರಿಂದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ: ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಶಿಬಿರ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಭಾರಿ ಮಳೆಗೆ ಅರಸಿನಮಕ್ಕಿಯ ಕಾನದಲ್ಲಿ ಗುಡ್ಡದಿಂದ ರಭಸವಾಗಿ ಬಂದ ನೀರಿನಿಂದ ಮನೆಗೆ ಹಾನಿ

Suddi Udaya

ಮನೆಗೆ ಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು ಕಾರ್ಯ

Suddi Udaya
error: Content is protected !!