Uncategorized

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

ಸರಳಿಕಟ್ಟೆ: ಇಲ್ಲಿನ ಜುಮ್ಮಾ ಮಸೀದಿ ವ್ಯಾಪ್ತಿಯ 175 ಕುಟುಂಬಗಳಿಗೆ ಈ ಬಾರಿಯ ರಂಝಾನ್ ಕಿಟ್ ವಿತರಿಸಲಾಯಿತು.

ಸ್ಥಳೀಯ ಜುಮ್ಮಾ ಮಸೀದಿಯ ಖತೀಬ್ ಬಹು. ಅಬ್ದುರ್ರಹೀಂ ಅಝ್ಹರಿ ಸಖಾಫಿಯವರು ದುವಾ ನೆರವೇರಿಸುವ ಮೂಲಕ ಸರಳಿಕಟ್ಟೆ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರಳಿಕಟ್ಟೆ ಜಮಾಅತ್ ವ್ಯಾಪ್ತಿಯಲ್ಲಿರುವ ಬಡ ಹಾಗೂ ಮಧ್ಯಮ ಕುಟುಂಬಗಳು ಸೇರಿದಂತೆ 175 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ಸರಳಿಕಟ್ಟೆ ಗೈಸ್ ಅತ್ಯಂತ ಪುಣ್ಯದ ಮತ್ತು ಗೌರವದ ಕಾರ್ಯವನ್ನು ನೆರವೇರಿಸಿದೆ.

ಸರಳಿಕಟ್ಟೆ ಊರಿನ ಉದ್ಯಮಿಗಳ,ದಾನಿಗಳ ನೆರವಿನಿಂದ ಸರಳಿಕಟ್ಟೆ ಗೈಸ್ ಜಮಾಅತ್ ವ್ಯಾಪ್ತಿಯ ಸದಸ್ಯರ ಚಿಕಿತ್ಸೆಯ ವೆಚ್ಚ, ನಿರ್ಗತಿಕರಿಗೆ ನೆರವು, ಮನೆ ನಿರ್ಮಾಣಕ್ಕೆ ಸಹಾಯ, ಮದುವೆಗೆ ಸಹಾಯಧನ ಸೇರಿದಂತೆ ಹತ್ತಾರು ಸಮಾಜಮುಖಿ‌ ಕಾರ್ಯಗಳನ್ನು ಸದಾ ನಡೆಸುತ್ತಾ ಮುನ್ನಡೆಯುತ್ತಿದೆ.

ರಂಝನ್ ಕಿಟ್ 175 ಕುಟುಂಬಗಳ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಸರಳಿಕಟ್ಟೆ ಗೈಸ್ ಪದಾಧಿಕಾರಗಳೇ ವಾಹನಗಳ ಮೂಲಕ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ ಪಿ.ಎಂ. ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಪಿ.ಎಸ್, ಜೊತೆ ಕಾರ್ಯದರ್ಶಿ ಆಸಿಫ್ ಪುಯಿಲ, ಸಮಿತಿ ಸದಸ್ಯರಾದ ಅಬ್ಬಾಸ್ ಮಡಿಕೆರೆಬೆಟ್ಟು, ನಾಸಿರ್ ಎಸ್, ಸಮದ್ ಎಸ್, ಉದ್ಯಮಿಗಳಾದ ಅಶ್ರಫ್ ಬಂಡಾಡ್, ಮುಸ್ತಫಾ ಕಾಜಿನಳಿಕೆ, ಉನೈಸ್ ಚಿಂಗಾಣಿಬೆಟ್ಟು, ನವಾಝ್ ಪಿ.ಎಸ್. ಹೈದರ್ ಗುಂಪಕಲ್ಲು, ಮುಸ್ತಫಾ ಕುರುಬರಪಾಲು, ನೌಮನ್ ಸರಳಿಕಟ್ಟೆ, ಖಾಸಿಂ ಮೇಗಿನಪುಯಿಲ, ಅಬ್ಬಾಸ್ ನೆಲ್ಲಿಪಳಿಕೆ ಉಪಸ್ಥಿತರಿದ್ದರು.

Related posts

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಇಂದಬೆಟ್ಟು-ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ಯುವ ಸಂಘಟನೆಯಿಂದ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಶ್ರಮದಾನ

Suddi Udaya

ನ್ಯಾಯತರ್ಪು: ಕೊರೆಜಂಡ ಮನೆಗೆ ಸಿಡಿಲು ಬಡಿದು ಬಿರುಕು ಬಿಟ್ಟ ಗೋಡೆ,ಕಿತ್ತು ಹೋದ ವಿದ್ಯುತ್ ವಯರಿಂಗ್

Suddi Udaya

ಬೆಳ್ತಂಗಡಿ ಪ್ರವಾಸಿ ಮಂದಿರ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಲೋಕೋಪಯೋಗಿ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ನಯನಾಡು ಸ.ಪ್ರೌ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತು : ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ

Suddi Udaya
error: Content is protected !!