September 6, 2026
Uncategorized

ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರದ 157ನೇ ಬೂತು ವತಿಯಿಂದ ಗುರು ಪೂರ್ಣಿಮೆ ಆಚರಣೆ

ಕೊಯೂರು: ಭಾರತೀಯ ಜನತಾ ಪಕ್ಷದ ವತಿಯಿಂದ ಗುರು ಪೂರ್ಣಿಮೆಯ ಭಾಗವಾಗಿ ಕೊಯ್ಯೂರು ಗ್ರಾಮದ 157ನೇ ಬೂತ್ ನಲ್ಲಿ ಯಕ್ಷಗಾನ ಗುರುಗಳಾದ ವಿಶ್ವನಾಥ ಗೌಡ ಪಾಂಬೇಲು ಅವರಿಗೆ ಗುರುಪೂರ್ಣಿಮೆ ದಿನ ಗುರುವಂದನೆ ಕಾರ್ಯಕ್ರಮ ಜು. 10ರಂದು ನಡೆಯಿತು.

ಮೊದಲ ಬಾರಿಗೆ 1986 ರಲ್ಲಿ ಧರ್ಮಸ್ಥಳದ ಲಲಿತಾ ಕಲಾಭವನದಲ್ಲಿ ಯಕ್ಷಗಾನ ಶಿಕ್ಷಣ ಪೂರ್ಣಗೊಳಿಸಿ, ನಂತರ 2004ರಿಂದ ಸ್ಥಳೀಯ ಶಾಲಾ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಾ ತಮ್ಮ ಯಕ್ಷ ಸೇವೆಯನ್ನು ಪ್ರಾರಂಭಿಸಿದರು. 2018ರ ಕೊರೊನಾ ಮಹಾಮಾರಿಯವರೆಗೂ ಹಲವಾರು ಮಕ್ಕಳಿಗೆ ಯಕ್ಷ ಗುರುವಾಗಿ ಸೇವೆ ನೀಡುತ್ತಾ ಬಂದಿರುತ್ತಾರೆ. ಈ ಎಲ್ಲಾ ಸಂಗತಿಗಳನ್ನೂ ಮನಗೊಂಡು ಇವರು ಗುರು ಪೂರ್ಣಿಮೆಯ ದಿನದಂದು ಕಾರ್ಯಕರ್ತರ ಸಮ್ಮುಖದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.

ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ತಾರಾನಾಥ ಗೌಡ ಮೇಗಿನಬಜಿಲ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಹರೀಶ್ ಗೌಡ ಬಜಿಲ, ಕೊಯ್ಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಡೆಂಬುಗ, ಕಾರ್ಯಕರ್ತರಾದ ಮೋಹನದಾಸ್ ಬಜಿಲ, ಶೇಖರ ಗೌಡ ಕೋರಿಯಾರು ಉಪಸ್ಥಿತರಿದ್ದರು. ದಾಮೋದರ ಗೌಡ ಬೆರ್ಕೆ ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿ, ಭರತ್ ಡೆಂಬುಗ ವಂದಿಸಿದರು.

Related posts

ಕಳಿಯ ಕುಂಟಿನಿ ನಿವಾಸಿ ಹರಿಪ್ರಸಾದ್ ಭಟ್ ನಿಧನ

Suddi Udaya

ಶಿಶಿಲ: ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಶಿಶಿರದಲ್ಲಿ ನೋಂಪಿ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡ ಉದ್ಘಾಟನೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ದ ಕ ಜಿಲ್ಲಾ ಗೊಲ್ಲ (ಯಾದವ )ಸಂಘ ಬೆಳ್ತಂಗಡಿ ವಲಯದ ವತಿಯಿಂದ ಮನಿಷಾರಿಗೆ ಸನ್ಮಾನ

Suddi Udaya
error: Content is protected !!