September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

ಬೆಳ್ತಂಗಡಿ: ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ಗ್ರಾಹಕರಾಗಿ ಬರುತ್ತಿದ್ದ ನಾನು ಇಂದು ಅತಿಥಿಯಾಗಿರುವುದು ಸಂತಸ ತಂದಿದೆ. ಆಭರಣ ಖರೀದಿಗೆಂದು ಚಿಂತಿಸಿದಾಗ ಮನದಲ್ಲಿ ಬರುವುದು ಮುಳಿಯ ಸಂಸ್ಥೆ. ವ್ಯವಹಾರದಲ್ಲಿ ಆತಿಥ್ಯವನ್ನು ಸದಾ ಗ್ರಾಹಕರಿಗೆ ನೀಡುತ್ತಿದ್ದು ಇದರಿಂದ ಸಂಸ್ಥೆ ಜನಮನಸದಲ್ಲಿ ನೆಳ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಮುಂಡಾಜೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ನಲ್ಲಿ ಮಾ 3ರಂದು ನಡೆದ ಡೈಮಾಂಡ್ ಪೆಸ್ಟ್ ಚಾಲನೆ ಸಮಾರಂಭದಲ್ಲಿ ಮಾತನಾಡಿದರು.

ಜೇಸಿಐ ಭಾರತದ ವಲಯ 15 ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ, 80 ದಶಕದಿಂದ ಜನರೊಂದಿಗೆ ಅವಿನಾಭವ ಸಂಬಂಧವನ್ನು ಉಳಿಸಿಕೊಂಡು ಬಂದಿರುವ ಸಂಸ್ಥೆ ಮುಳಿಯ. ಚಿನ್ನಾಭಾರಣಗಳಲ್ಲಿ ಉತ್ತಮ ಗುಣ ಮಟ್ಟವನ್ನು ನೀಡುತ್ತಾ ಬಂದಿರುವ ಮುಳಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವ್ಯವಹಾರಕ್ಕೆ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆ ಮುಳಿಯ ಎಂದು ಅಭಿಪ್ರಾಯಪಟ್ಟರು.

ಮಾರ್ಕೇಟಿಂಗ್ ಕನ್ಸಲ್‌ಟೆಂಟ್ ವೇಣು ಶರ್ಮ ಮಾತನಾಡಿ, ಚಿನ್ನಭಾರಣ ಸುರಕ್ಷಿತ ಹೂಡಿಕೆಯ ಉದ್ಯಮವಾಗಿದೆ. ವಿಶಿಷ್ಟ ಹಾಗೂ ವಿನೂತನ ವಜ್ರಭಾರಣಗಳ ಸಂಗ್ರಹಣೆ ಈ ಬಾರಿಯ ಡೈಮಾಂಡ್ ಫೆಸ್ಟ್ನಲ್ಲಿದೆ. ಜೀವನದ ಮೊದಲ ವಜ್ರಾಭರಣ ಖರೀದಿಯನ್ನು ಮುಳಿಯೊಂದಿಗೆ ಪ್ರಾರಂಭಿಸಿ ಎಂದು ಹೇಳಿದರು.


ಕಾರ್ಯನಿರ್ವಾಹಕ ಕಾರ್ಯದರ್ಶಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಹಕರು, ಸಿಬ್ಬಂದಿ ವರ್ಗವದರು ಭಾಗವಹಿಸಿದ್ದರು. ಶಾಖಾ ಪ್ರಬಂಧಕ ಲೋಹಿತ್ ಸ್ವಾಗತಿಸಿ, ಸಿಬ್ಬಂದಿ ಅಶ್ವಥ್ ವಂದಿಸಿ, ಕನ್ನಿಕಾ ನಿರೂಪಿಸಿದರು.

Related posts

ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಡಾ. ಅಖಿಲ ತೇಜಸ್ವಿ ಆರ್. ಅವರಿಗೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ

Suddi Udaya

ಕರಂಬಾರು ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮಕ್ಕಳ ಮೆಟ್ರಿಕ್‌ ಮೇಳ ಕಾರ್ಯಕ್ರಮ

Suddi Udaya

ರಾಜ್ಯ ಪುರಸ್ಕಾರ ಪರೀಕ್ಷೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಜೆಡಿಎಸ್ ಚುನಾವಣಾ ಕಚೇರಿ ಪ್ರಾರಂಭ

Suddi Udaya

ತಣ್ಣೀರುಪಂತ: ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya
error: Content is protected !!