

ಮಡಂತ್ಯಾರು:ಸಹಕಾರಿ ರಂಗದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಅಭ್ಯರ್ಥಿ, ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಯುವ ನಾಯಕ, ಎಂ.ಬಿ ಎ ಪದವೀಧರ ಜೋಯಲ್ ಗಾಡ್ಫಿ ಮೆಂಡೋನ್ಸಾ ಅಧ್ಯಕ್ಷರಾಗಿ ಹಾಗೂ
ಉಪಾಧ್ಯಕ್ಷರಾಗಿ, ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ, ಹಾ.ಉ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಮಾಜಿ ಸೈನಿಕ ಕಾಂತಪ್ಪ ಗೌಡ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಕಳೆದ ಅವಧಿಯ ಅಧ್ಯಕ್ಷ ಅರವಿಂದ ಜೈನ್, ಕಳೆದ ಬಾರಿಯ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ, ಕುಮಾರ ನಾಯ್ಕ, ಅಮಿತಾ ಪ್ರಿಯಾ ಲೋಬೋ, ಮಹಾಬಲ ಕೆ, ಸುರೇಶ್ ಎಸ್ ಕಿಶೋರ್ ಕುಮಾರ್, ಪದ್ಮನಾಭ ಸಾಲಿಯಾನ್, ಗೋಪಾಲಕೃಷ್ಣ ಕೆ, ಗಣೇಶ್ ಮೂಲ್ಯ ಆಯ್ಕೆಯಾದರು.
ಸಹಕಾರಿ ಭಾರತಿ 9 ರಲ್ಲಿ ಜಯಗಳಿಸಿದೆ ಹಾಗೂ ಕಾಂಗ್ರೇಸ್ ಬೆಂಬಲಿತ 3 ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ.
ವಿಲಾಸ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.