26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜಾತ್ರಾಮಹೋತ್ಸವ: 25 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಂದ ಅಮ್ಮನ ಮಡಿಲ ಪ್ರಸಾದ ಸ್ವೀಕಾರ

ಪುತ್ತೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.21 ರಿಂದಪ್ರಾರಂಭಗೊಂಡು ಮಾ.5 ರವರೆಗೆ ಅದ್ದೂರಿಯಾಗಿ ನಡೆಯಲಿದೆ.

ಮಾ.2 ರಂದು ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ ನಡೆದು ಮಂಗಳಾರತಿ ಮತ್ತು ಧೂಮವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ ನಡೆಯಿತು. ನಂತರ ಧ್ವಜಾರೋಹಣ ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.

ಬಳಿಕ ವಿಶೇಷವಾಗಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ‘ಅಮ್ಮನ ಮಡಿಲ ಪ್ರಸಾದ’ ಎಂಬ ಶ್ರೀಮಾತೆ ದೇಯಿ ಬೈದ್ಯೆತಿ ಅಮ್ಮನವರ ಮಹಾ ಸಂಕಲ್ಪದಂತೆ ನಾಡಿನ ಎಲ್ಲಾ ಮಾತೆಯರಿಗೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ ಮಡಿಲು ತುಂಬಿಸುವ ಕಾರ್ಯಕ್ರಮ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು. ನಾಡಿನ ಮೂಲೆಮೂಲೆಗಳಿಂದ 25000 ಕ್ಕೂ ಹೆಚ್ಚು ಸಹಸ್ರ ಸಂಖ್ಯೆಯಲ್ಲಿ ಮಾತೆಯರು ಆಗಮಿಸಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿ ಪಾವನರಾದರು.

ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಕನ್ಯಾಡಿ ಪೀಠಾಧಿಪತಿಗಳು,1008 ಮಹಾ ಮಂಡಲೇಶ್ವರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಸಂಜೆ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತೀ ಸೇವೆ ಮಹಾಪೂಜೆ ನಡೆಯಿತು. ಊರು ಪರವೂರುಗಳಿಂದ ಸಹಸ್ರ ಸಂಖ್ಯೆಯಲ್ಲಿ ಜನಸಾಗರ ಗೆಜ್ಜೆಗಿರಿಯತ್ತ ಹರಿದು ಬಂದು ಶ್ರೀ ಕೋಟಿ ಚೆನ್ನಯ, ದೇಯಿ ಬೈದ್ಯೆತಿಯ ಅನುಗ್ರಹಕ್ಕೆ ಪಾತ್ರವಾಯಿತು.

Related posts

ಸುದ್ದಿ ಉದಯ ಪತ್ರಿಕೆಯ ಸೌಮ್ಯರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಸಮಿತಿಯಿಂದ ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

Suddi Udaya

ನಿವೃತ್ತ ಶಿಕ್ಷಕ ಶಂಕರ್ ಎನ್. ತಾಮನ್ಕರ್ ಅವರಿಂದ ರೂ.47 ಸಾವಿರ ಧನಸಹಾಯ

Suddi Udaya

ಇಳಂತಿಲ :ಶ್ರೀ ಕೇಶವ ಶಿಶು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1 ಲಕ್ಷ ನೆರವು

Suddi Udaya

ಕೊಕ್ಕಡದಲ್ಲಿ ‘ವಿನು ಸ್ಕೂಲ್ ಆಫ್ ಆರ್ಟ್ಸ್ ‘ ಶುಭಾರಂಭ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಚಾರ ಮಂಟಪ ಕಾರ್ಯಕ್ರಮ

Suddi Udaya
error: Content is protected !!