March 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿಧಾನ ಪರಿಷತ್ ಕಲಾಪ; ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ, ಫಾರ್ಮ್-3 ನೀಡಲು ಪ್ರತಾಪಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ಬಿ-ಖಾತೆಯಿಂದ ಸರಕಾರಕ್ಕೆ ತೆರಿಗೆ ಬರುತ್ತಿದೆ ಹೊರತು ಮನೆ ಕಟ್ಟಲು ಪರವಾನಿಗೆ, ಬ್ಯಾಂಕ್ ಸಾಲ ಪಡೆಯಲು, ಜಾಗ ಮಾರಾಟ ಮಾಡಲು ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು. ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಬಿ-ಖಾತೆಯಿಂದ ಆಗುತ್ತಿರುವ ತೊಂದರೆ ಕುರಿತು ವಿಷಯ ಪ್ರಸ್ತಾಪಿಸಿದರು.

ಮೂಡದಲ್ಲಿ ಸಿಬ್ಬಂದಿಗಳು ಇಲ್ಲ. ವಿನ್ಯಾಸ ನಕ್ಷೆ ನೀಡಿದರೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲು ಆಗುತ್ತದೆ. ಬೆಂಗಳೂರನ್ನು ಇಟ್ಟಕೊಂಡು ರಾಜ್ಯವನ್ನು ತುಲಣೆ ಮಾಡುವುದು ಬೇಡ. ಗ್ರಾಮದಲ್ಲಿ ಕಂದಾಯ ಇಲಾಖೆ ಕರ್ನ್ವ್ಷನ್ ಮಾಡಿರುವ ಜಾಗ. ಮನೆ ಕಟ್ಟಿರುವ ಜಾಗಗಳಿಗೆ ಫಾರ್ಮ-3ಎ ನೀಡಿ. ಈಗ ಡೋರ್ ನಂಬ್ರ ಸಿಕ್ಕಿದೆ ಸರಕಾರಕ್ಕೆ ತೆರಿಗೆ ಸಿಕ್ಕಿದೆ ಇದರಿಂದ ಏನು ಪ್ರಯೋಜನ. ಬೆಂಗಳೂರಿನಲ್ಲಿ ನಡೆಯುವ ಅವಾಂತರಗಳಿಗೆ ಗ್ರಾಮೀಣ ಪ್ರದೇಶದ ಸಣ್ಣ ಸೈಟ್‌ಗಳಿಗೆ ಅನ್ವಯ ಮಾಡಬೇಡಿ. ಅಂತವರಿಗೆ ವಿಶೇಷ ರಿಯಾಯಿತಿ ನೀಡಿ. ಫಾರ್ಮ್ ನಂಬ್ರ-3 ನೀಡಿ ಎಂದು ಒತ್ತಾಯಿಸಿದ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಈ ಬಗ್ಗೆ ಗಮನಹರಿಸಲಾಗುವುದು. ಎಲ್ಲ ಜನರ ಸಮಸ್ಯೆ ಬಗೆಹರಿಯಬೇಕು. ಸಲಹೆಯನ್ನು ಸ್ವೀಕರಿಸಲಾಗುವುದು ಎಂದು ಪೌರಡಳಿತ ಸಚಿವರು ಉತ್ತರಿಸಿದರು.

Related posts

ಕೊಕ್ಕಡ: ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ವೇಣೂರು: ಪಡ್ಡಂದಡ್ಕ ಕಟ್ಟೆ ನಿವಾಸಿ ಪ್ರಗತಿಪರ ಕೃಷಿಕ ಕೆ ಮಹಮ್ಮದ್ ನಿಧನ

Suddi Udaya

ಪಟ್ರಮೆ : ರೂ. 40 ಲಕ್ಷ ವೆಚ್ಚದ ಉಳಿಯ ಬೀಡಿನ ಕಾಲು ಸೇತುವೆಗೆ ಶಿಲಾನ್ಯಾಸ

Suddi Udaya

ಕೋವಿಡ್ ನಲ್ಲಿ ಹೆತ್ತವರನ್ನು ಕಳೆದುಕೊಂಡವರ ಮಕ್ಕಳಿಗೆ ಶಿಕ್ಷಣಕ್ಕಾಗಿ ಶುಲ್ಕ ವಿತರಣೆ

Suddi Udaya

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

Suddi Udaya

ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಆರ್ಥಿಕ ನೆರವು

Suddi Udaya
error: Content is protected !!