37.8 C
ಪುತ್ತೂರು, ಬೆಳ್ತಂಗಡಿ
March 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶುಲ್ಕ ಪಾವತಿ ಮಾಡದ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ ಇಂದಬೆಟ್ಟು ಗ್ರಾಮ ಪಂಚಾಯತ್


ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತ್ ನ 2024-2025 ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೆಗೆದುಕೊಂಡ ತಿರ್ಮಾನದಂತೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡು ಕುಡಿಯುವ ನೀರಿನ ಶುಲ್ಕ ಪಾವತಿಸದ ಮನೆಯವರ ನೀರಿನ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು ಮಾ. 1ರಂದು ಮೊದಲ ಹಂತದಲ್ಲಿ ಲಿಂಗಾಂತ್ಯಾರು ಹಾಗೂ ಪಿಚಲಾರು ಪ್ರದೇಶದಲ್ಲಿ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಪಂಪ್ ಆಪರೇಟರ್ ಹಾಗೂ ಸ್ಥಳೀಯರ ಸಮಕ್ಷಮದಲ್ಲಿ ಶುಲ್ಕ ಪಾವತಿಸದ ಮನೆಯವರ ನೀರಿನ ಸಂಪರ್ಕ ಕಡಿತಗೊಳಿಸಲಾಯಿತು.

ಈಗಾಗಲೇ ಗ್ರಾಮ ಪಂಚಾಯತ್ ಕುಡಿಯುವ ನೀರಿನ ಶುಲ್ಕ ಬಾಕಿ ಇರುವವರಿಗೆ ಪಂಚಾಯತ್ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ನೋಟಿಸ್ ನೀಡಲಾಗಿದ್ದು ಹಲವರು ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಶುಲ್ಕ ಪಾವತಿಸಿರುತ್ತಾರೆ, ಇನ್ನು ಶುಲ್ಕ ಪಾವತಿಸದ ಗ್ರಾಮದ ಇತರ ಭಾಗಗಳಲ್ಲಿ ನೀರಿನ ಸಂಪರ್ಕ ಮುಂದಿನ ಹಂತದಲ್ಲಿ ಕಡಿತಗೊಳಿಸಲಾಗುವುದು, ಈಗಾಗಲೇ ಮೆಸ್ಕಾಂ ಇಲಾಖೆ ಕುಡಿಯುವ ನೀರಿನ ವಿದ್ಯುತ್ ಸ್ಥಾವರದ ಬಿಲ್ ಪಾವತಿಸಲು ನೋಟಿಸ್ ನೀಡಿದ್ದು ಕುಡಿಯುವ ನೀರಿನ ಬಳಕೆದಾರರು ನಿಗದಿತ ಸಮಯದಲ್ಲಿ ಪಂಚಾಯತ್ ಗೆ ಶುಲ್ಕ ಪಾವತಿಸಿದರೆ ಮೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸಬಹುದು ಎಂದು ಪಂಚಾಯತ್ ಆಡಳಿತ ಮಂಡಳಿ ತಿಳಿಸಿದೆ. ಈಗಾಗಲೇ ಕುಡಿಯುವ ನೀರಿನ ಜೆಜೆಎಂ ಯೋಜನೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಬಳಕೆದಾರರಿಗೆ ಉಪಯುಕ್ತವಾಗಲಿದೆ. ಕುಡಿಯುವ ನೀರಿಗಾಗಿ ತೆಗೆದುಕೊಂಡ ಕನೆಕ್ಷನ್ ಬೇರೆ ಉದ್ದೇಶಕ್ಕೆ ಬಳಸಿದರೆ ಕನೆಕ್ಷನ್ ಕಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Related posts

ಶಿಶಿಲ: ಕೃಷಿಕ ಆನಂದ ಕೆದಿಲ್ಲಾಯ ನಿಧನ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

Suddi Udaya

ಕಳಿಯ ಗ್ರಾಮ ಪಂಚಾಯತು ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya
error: Content is protected !!