33.2 C
ಪುತ್ತೂರು, ಬೆಳ್ತಂಗಡಿ
March 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆವರದಿ

ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ: ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ

ಬೆಳ್ತಂಗಡಿ: ಕೇಂದ್ರ ಸರಕಾರ ಉದ್ಧೇಶಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ವಿರೋಧಿಸಿ ಮುಂಡಾಜೆ, ಚಾರ್ಮಾಡಿ, ನೆರಿಯ ಈ‌ ಮೂರು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಮಸ್ಜಿದ್‌ ಮತ್ತು ಮೊಹಲ್ಲಾಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಭಟನಾ ಸಭೆಯು ಕಕ್ಕಿಂಜೆ ಪೇಟೆಯಲ್ಲಿ ಜರುಗಿತು.


ಇಲ್ಲಿನ‌ ಹಾರಿಸ್ ಹೊಟೇಲ್ ಬಳಿ‌ ಜಮಾಯಿಸಿದ ಹೋರಾಟಗಾರರು‌ ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಸಂವಿಧಾನಿಕ ವಕ್ಫ್ ತಿದ್ದುಪಡಿ‌ ಮಸೂದೆ ವಿರುದ್ಧ ವಾಟ್ಸ್ ಆಪ್ ಮೂಲಕ ರಚಿತವಾದ ಬಳಗದ ಸಂಯೋಜನೆಯಲ್ಲಿ ಈ ಹೋರಾಟ ಸಂಘಟಿಸಲಾಗಿತ್ತು.


ಇಸ್ಲಾಂ ನಲ್ಲಿ ವಕ್ಫ್ ಎಂದರೆ ಏನು? ವಕ್ಫ್ ಕಾಯ್ದೆಯ ತಿದ್ದುಪಡಿ ಹೇಗೇಗೆ ಆಯ್ತು, ಜಂಟಿ ಸದನ‌ ಸಮಿತಿ ನಡೆದುಕೊಂಡ ರೀತಿಯ ಬಗ್ಗೆ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ವಿಷಯ ಮಂಡಿಸಿದರು. ಕಾಯ್ದೆಯ ತಿದ್ದುಪಡಿಯ ಲೋಪಗಳೇನೇನು? ಕಾಯ್ದೆ ಬದಲಾವಣೆಯಲ್ಲಿ ಒಳಗೊಂಡಿರುವ ಅಸಂವಿಧಾನಿಕ ಅಂಶಗಳು ಏನೇನು? ಹಾಗೂ ಬದಲಾಗಲಿರುವ ಕಾಯ್ದೆಯಿಂದ ಆಗುವ ತೊಂದರೆಗಳು ಏನು ಎಂಬ ಬಗ್ಗೆ ಯುವ ನ್ಯಾಯವಾದಿ ನವಾಝ್ ಶರೀಫ್ ಅರೆಕ್ಕಲ್ ಮಾತನಾಡಿದರು.


ಸಾಮಾಜಿಕ ಕಾರ್ಯಕರ್ತ ಅಶ್ರಫ್ ಚಾರ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಆರು ಜಮಾಅತ್ ಗಳ ಪದಾಧಿಕಾರಿಗಳು, ಧರ್ಮಗುರುಗಳು, ಜಮಾಅತ್ ಬಾಂಧವರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಬಳಿಕ ಕಕ್ಕಿಂಜೆ ಪೇಟೆಯ ಮೂಲಕ ಗ್ರಾ.ಪಂ ಕಚೇರಿ ವರೆಗೆ ಜಾಥಾ ನಡೆಸಲಾಯಿತು. ಅಲ್ಲಿ ರಾಷ್ಟ್ರಪತಿಗಳಿಗೆ ಗ್ರಾ.ಪಂ ಪಿಡಿಒ‌ ಮೂಲಕ ಮನವಿ ಸಲ್ಲಿಸಲಾಯಿತು. ಅಬ್ದುಲ್ ನಾಸಿರ್ ಕಲ್ಲಗುಡ್ಡೆ ವಂದಿಸಿದರು.
ಕಬೀರ್ ಅರೆಕ್ಕಲ್ ನಿರೂಪಿಸಿದರು. ನಝೀರ್ , ಶರೀಫ್ ಹೆಚ್ ಎ, ಹನೀಫ್ ಕೋಣೆ ಮೊದಲಾದವರು ನಾಯಕತ್ವ ವಹಿಸಿದ್ದರು.

Related posts

ಜ. 31 -ಫೆ.04: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತಾಲೂಕು ಮಟ್ಟದ ಗೀತಾಗಾಯನ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ ಬಹುಮಾನ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya
error: Content is protected !!