ಬೆಳ್ತಂಗಡಿ: ಸುದೀರ್ಘ 36 ವರ್ಷಗಳ ಕಾಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಗಂಗಾಧರ ಬಳಂಜರವರು ಸೇವೆಯಿಂದ ಫೆ.28 ರಂದು ನಿವೃತ್ತಿ ಹೊಂದಿದ್ದಾರೆ.1989 ರಲ್ಲಿ ಗಂಗಾಧರ ಅವರು ಕರ್ತವ್ಯಕ್ಕೆ ಹಾಜರಾಗಿ ಪ್ರಾರಂಭದಲ್ಲಿ ಮಂಗಳೂರು ವಿಭಾಗಕ್ಕೆ ನಿಯೋಜನೆಗೊಂಡರು.

ನಂತರ ಹಾಸನ ವಿಭಾಗ, ಮೈಸೂರು ನಗರ ಸಾರಿಗೆ ವಿಭಾಗ ಮಂಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸಿ ಕಳೆದ ಏಳು ತಿಂಗಳ ಹಿಂದೆ ಭಡ್ತಿ ಗೊಂಡು ಪುತ್ತೂರು ವಿಭಾಗಕ್ಕೆ ನಿಯೋಜನೆಗೊಂಡಿರುತ್ತಾರೆ.ಮೈಸೂರು ನಗರದಲ್ಲಿ ಗ್ರಾಮಾಂತರ ಬಸ್ ನಿಲ್ದಾಣ,ಕುವೆಂಪುನಗರ ಬಸ್ ನಿಲ್ದಾಣ ಮತ್ತು ನಗರ ಸಾರಿಗೆ ಬಸ್ ನಿಲ್ದಾಣಗಳು ಇವರ ಮೇಲ್ವಿಚಾರಣೆಯಲ್ಲಿ ನಿರ್ಮಾಣವಾಗಿರುತದೆ.
ಹಾಸನದಲ್ಲಿ ಹೈಟೆಕ್ ನಗರ ಸಾರಿಗೆ ಬಸ್ ನಿಲ್ದಾಣ, ಸುಬ್ರಮಣ್ಯ, ಸುಳ್ಯ, ವಿಟ್ಲ, ಉಡುಪಿ ಹಾಗೂ ಬೈಂದೂರುನಲ್ಲಿ ಇವರ ಮಲ್ವಿಚಾರಣೆಯಲ್ಲಿ ಬಸ್ ನಿಲ್ದಾಣಗಳು ನಿರ್ಮಾಣವಾಗಿರುತದೆ. ಇವರು ಬಳಂಜ ಗ್ರಾಮದ ಪರಾರಿ ನಿವಾಸಿಯಾಗಿದ್ದು,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸದಸ್ಯ. ಪ್ರಸ್ತುತ ಮಂಗಳೂರಿನಲ್ಲಿ ಪತ್ನಿ ವಿಜಯಲಕ್ಷ್ಮಿ, ಪುತ್ರ ಚಿರಂತ್ ರವರೊಂದಿಗೆ ವಾಸವಾಗಿದ್ದಾರೆ.