April 29, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಮಾ.8: ಗುರುವಾಯನಕೆರೆ ಶಶಿಧರ ಶೆಟ್ಟಿಯವರ ನೇತೃತ್ವದಲ್ಲಿ ಭಾರತೀಯರ ಹೃದಯ ಸಾಮ್ರಾಟ್ “ಛತ್ರಪತಿ ಶಿವಾಜಿ” ಪ್ರಥಮ ನಾಟಕ : ನವಶಕ್ತಿ ಕ್ರೀಡಾಂಗಣದಲ್ಲಿ ಪ್ರದರ್ಶನ

ಬೆಳ್ತಂಗಡಿ: ಶಿವದೂತೆ ಗುಳಿಗೆ ಯಶಸ್ವಿ ನಾಟಕದ ನಂತರ, ಹೊಸತನದ ಟ್ರೆಂಡ್ ಆಗಿ ಹೊರಹೊಮ್ಮುತ್ತಿರುವ ವಿಜಯ್ ಕುಮಾರ್ ಕೊಡಿಯಸಲ್ ಬೈಲ್ ಅವರ ವಿನೂತನ ಪರಿಕಲ್ಪನೆಯ ತುಳು ಚಾರಿತ್ರಿಕ ನಾಟಕ “ಛತ್ರಪತಿ ಶಿವಾಜಿ ” ಅಧ್ಬುತ ರಂಗ ವಿನ್ಯಾಸ ಹಾಗೂ ವಸ್ತ್ರ ವಿನ್ಯಾಸದೊಂದಿಗೆ ಸುಪ್ರಸಿದ್ಧ ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಇವರ ನೇತೃತ್ವದಲ್ಲಿ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಮಾ. 8 ಶನಿವಾರ ಸಂಜೆ ಗಂಟೆ 7.30 ರಿಂದ ಪ್ರದರ್ಶನಗೊಳ್ಳಲಿದೆ.

ಭಾಷೆ ಮತ್ತು ಧರ್ಮ ವೈಷಮ್ಯದ ಗಡಿಗಳನ್ನು ಮೀರಿ ರೂಪುಗೊಂಡ ಹೊಸತನದ ಟ್ರೆಂಡ್ ಛತ್ರಪತಿ ಶಿವಾಜಿ ನಾಟಕದ ಪೂರ್ವ ಸಿದ್ದತೆಗಳು ಪೂರ್ಣಗೊಂಡಿದ್ದು ಮೊದಲ ಪ್ರಯೋಗ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಶಶಿರಾಜ್ ಕಾವೂರು ಅವರ ಅಧ್ಯಯನಾತ್ಮಕ ಆಧರಿಸಿ ಮರಾಠಿ ವಾತಾವರಣದ ಕಥೆಯನ್ನು ತುಳು ಭಾಷೆಯಲ್ಲಿ ಸಿನಿಮಾ ಶೈಲಿಯ ಡಬ್ಬಿಂಗ್,ಅದ್ಬುತ ರಂಗವಿನ್ಯಾಸದೊಂದಿಗೆ ರೂಪುಗೊಂಡಿದೆ. ಸುಮಾರು ಎರಡೂವರೆ ಗಂಟೆಯ ನಾಟಕವಾಗಿದ್ದು, ೧೩ ದೃಶ್ಯಗಳಲ್ಲಿ ಸಂಯೋಜನೆಗೊಂಡು,18 ಪ್ರಬುದ್ದ ಕಲಾವಿದರು ಕಥೆಗೆ ಜೀವ ತುಂಬಿದ್ದಾರೆ.
ಉದ್ಯಮಿ,ಸಮಾಜ ಸೇವಕ, ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿಯವರ ಮುಂದಾಳತ್ವದಲ್ಲಿ ಗುರುವಾಯನಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಛತ್ರಪತಿ ಶಿವಾಜಿ ನಾಟಕಕ್ಕೆ ಜನ ಸಾಗರ ಹರಿದು ಬರುವ ನಿರೀಕ್ಷೆಯಿದೆ.

ರಾಷ್ಟ್ರಭಕ್ತಿ ಸಾರುವ “ಛತ್ರಪತಿ ಶಿವಾಜಿ” ನಾಟಕ : ಶಶಿಧರ ಶೆಟ್ಟಿ
ಈ ದೇಶವನ್ನು ವಿದೇಶಿಯರ ಕಪಿಮುಷ್ಟಿಯಿಂದ ಬಿಡಿಸಿ,ಹಿಂದುಗಳ ಸ್ವರಾಜ್ಯ ಸ್ಥಾಪನೆಯಾಗಬೇಕೆಂದು ಕನಸು ಕಂಡಿದ್ದ ಹಿಂದೂಸ್ಥಾನದ ಮೊದಲ ರಾಷ್ಟ್ರೀಯವಾದಿ,ಭಾರತೀಯರ ಹೃದಯ ಸಾಮ್ರಾಟ್, ಪರಾಕ್ರಮಿ ಶಿವಾಜಿ ಮಹಾರಾಜ್ ಅವರ ನಾಟಕ ನವಶಕ್ತಿ ಕ್ರೀಡಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಸಂತಸ ತಂದಿದೆ.ನಾಟಕಕ್ಕೆ ಬೇಕಾದ ಸಿದ್ದತೆಗಳನ್ನು ಈಗಾಗಲೇ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಯುವ ಮನಸ್ಸುಗಳು ಸೇರುವ ನೀರಿಕ್ಷೆಯಿದೆ.ಬೆಳ್ತಂಗಡಿಯಲ್ಲಿ ಬೇರೆ ಬೇರೆ ಮಾದರಿಯ ನಾಟಕವನ್ನು ವೀಕ್ಷಣೆ ಮಾಡಿದ್ದೇವೆ. ಶಿವಾಜಿಯ ಪರಾಕ್ರಮ, ರಾಷ್ಟ್ರ ಪ್ರೇಮ, ಮತ್ತು ದೇಶ ಭಕ್ತಿಯನ್ನು ಇಂದಿನ ಯುವ ಸಮಾಜಕ್ಕೆ ತಿಳಿಸುವ ಅನಿವಾರ್ಯತೆಯಿದೆ ಎಂದು ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ತಿಳಿಸಿದ್ದಾರೆ.

Related posts

ಕಜಕೆ, ಎಳನೀರು , ಕಕ್ಕಿಂಜೆ ಶಾಲಾ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಭೇಟಿ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಕುಪ್ಪೆಟ್ಟಿ ಸಮೀಪ ಗುಡ್ಡ ಜರಿದು ಅಪಾಯದ ಸ್ಥಿತಿ ನಿರ್ಮಾಣ

Suddi Udaya

ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿ ಆಯ್ಕೆ

Suddi Udaya

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya
error: Content is protected !!