ಬೆಳ್ತಂಗಡಿ: ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್108 ವಾಹನಕ್ಕೆ ಮಾ.7ರಂದು ಟಯರ್ ಅಳವಡಿಸಲಾಗಿದ್ದು ಮಾ8ರಿಂದ ಸೇವೆಗೆ ಲಭ್ಯವಾಗಲಿದೆ.
ಸಮುದಾಯ ಕೇಂದ್ರದಲ್ಲಿ ಟಯರ್ ಸವೆದು ಅಂಬ್ಯುಲೆನ್ಸ್ಸೇವೆ ಸ್ಥಗಿತಗೊಳಿಸಿ ಮೂಲೆ ಸೇರಿತ್ತು ಈ ಬಗ್ಗೆ ಬೆಳ್ತಂಗಡಿ ಸುದ್ದಿ ಉದಯ ವಾರ ಪತ್ರಿಕೆ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲೆ ಸೇರಿದ 108 ಅಂಬ್ಯುಲೆನ್ಸ್ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.

ರಾಜ್ಯದಲ್ಲಿ ಹಲವು 108 ಅಂಬ್ಯುಲೆನ್ಸ್ ಗಳು ಬೇರೆ ಬೇರೆ ಸಮಸ್ಯೆಗಳಿಂದ ಮೂಲೆ ಸೇರಿದ್ದರೂ ಕೊಕ್ಕಡದ ಅಂಬ್ಯುಲೆನ್ಸ್ ಮಾತ್ರ ಕೂಡಲೇ ರಿಪೇರಿಯಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಸುದ್ದಿ ಉದಯ ವರದಿ ಕುರಿತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.