ಬೆಳ್ತಂಗಡಿ: ಬಂದಾರು ಮತ್ತು ಕೊಕ್ಕಡ ಗ್ರಾಮವನ್ನು ಬೆಸೆಯುವ ಮೈಪಾಲ ಸೇತುವೆಯ ಸುಮಾರು ರೂ. 72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಸೇತವೆಯ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜ ಮಾ.8 ರಂದು ವೀಕ್ಷಿಸಿದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕೊಕ್ಕಡ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಯೋಗಿಶ್ ಆಲಂಬಿಲ , ಸದಸ್ಯ ವಿಶ್ವನಾಥ್ ಕಕ್ಕುದೋಳಿ, ಎಸ್‌ಸಿ ಮೋರ್ಚಾದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಕೊಕ್ಕಡ ಪ್ಯಾಕ್ಸ್ ನಿರ್ದೇಶಕ ಶ್ರೀನಾಥ್ ಬಡಕೈಲು, ಬಿಜೆಪಿ ಮುಖಂಡ ಮಹಾಬಲ ಗೌಡ ನಾಗಂದೋಡಿ, ಸ್ಥಳಿಯರಾದ ತಿಮ್ಮಪ್ಪ ಗೌಡ ಮೈಪಾಲ, ಮಾಧವ ಕುರ್ಲೆ, ಬೂತ್ ಸಮಿತಿ ಅಧ್ಯಕ್ಷ ಕಿರಣ್ ಬಲ್ತಿಮಾರ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.