March 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುಂಡೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಕೇಳ್ಕರೇಶ್ವರ ಬಸ್ಸು ತಂಗುದಾಣ ಉದ್ಘಾಟನೆ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಇದರ ವತಿಯಿಂದ ಬಳಂಜ ಗ್ರಾಂ.ಪಂ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಗುಂಡೇರಿಯಲ್ಲಿ ನಿಮಿ೯ಸಲಾದ ಕೇಳ್ಕರೇಶ್ವರ ನೂತನ ಬಸ್ಸು ತಂಗುದಾಣದ ಉದ್ಘಾಟನಾ ಸಮಾರಂಭವು ಮಾ.8ರಂದು ಗುಂಡೇರಿಯಲ್ಲಿ ನಡೆಯಿತು.

ತಂಗುದಾಣವನ್ನು ಕೇಳ್ಕರೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ರಾಮಚಂದ್ರ ರಾವ್, ಅಮನಬೈಲು ಉದ್ಘಾಟಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಈ ಭಾಗದ ಜನರ ಬಹಳಷ್ಟು ಅವಶ್ಯಕತೆ ಆಗಿದ್ದ ಬಸ್ ತಂಗುದಾಣ ವನ್ನು ಲಯನ್ಸ್ ಕ್ಲಬ್ ವತಿಯಿಂದ ಮಾಡಿ ಕೊಟ್ಟಿದ್ದೇವೆ. ಇಂತಹ ಸೇವಾ ಕಾರ್ಯಗಳು ಜನರಿಗೂ ಸ್ಫೂರ್ತಿ ಆಗಲಿ ಎಂದು ಹಾರೈಸಿದರು.
ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಜನರ ಅಗತ್ಯತೆಯನ್ನು ಲಯನ್ಸ್ ಕ್ಲಬ್ ಪೂರೈಸಿದೆ. ಇನ್ನಷ್ಟು ಕಾಯ೯ಕ್ರಮಗಳನ್ನು ಮಾಡುವ ಯೋಜನೆ ನಮ್ಮಲ್ಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಳಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಭಾಗವಹಿಸಿ ಮಾತನಾಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಬಹಳಷ್ಟು ಉತ್ತಮ ಕಾರ್ಯ ಮಾಡಿದೆ. ಜನರಿಗೆ ಅಗತ್ಯವಾಗಿ ಬೇಕಾಗಿದ್ದ ಬಸ್ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಆದರ್ಶವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹಾರೈಸಿದರು.


ಬಳಂಜ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿರ್ಲಾಲು ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ನವೀನ್ ಕೆ ಸಾಮಾನಿ, ಉದ್ಯಮಿ ಸಂತೋಷ್ ಹೆಗ್ಡೆ ಮಾರುತಿ ನಿಲಯ, ಕೇಳ್ಕರ ದೇವಸ್ಥಾನದ ಜಾತ್ರೋತ್ಸವ ಅಧ್ಯಕ್ಷ ರಾಜಿತ್ ರೈ, ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಹೇಮಂತ್ ಕಟ್ಟೆ, ಪಂಚಾಯತ್ ಸದಸ್ಯರಾದ ನಿಜಾಂ, ಲೀಲಾವತಿ, ಪ್ರಸನ್ನ, ಪದ್ಮಾವತಿ. ಶಿರ್ಲಾಲು ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ್ ರಾವ್, ಲಯನ್ಸ್ ಕೋಶಾಧಿಕಾರಿ ಅಮಿತಾನಂದ ಎಚ್. ಹೆಗ್ಡೆ,ಬಾಲಕೃಷ್ಣ ಶೆಟ್ಟಿ ನೇಸರ, ಶರತ್ ಕಾಡಬಾಗಿಲು, ವಸಂತ ಶೆಟ್ಟಿ ಮುಂಡೇಲು, ಅಶೋಕ್ ಕುಮಾರ್ ಬಿ.ಪಿ, ಅನಂತ್ ಭಟ್ ಕೇಳ್ಕರ , ಜಯಂತ ಕಟ್ಟೆ, ಪ್ರಮೋದ್ ಕಟ್ಟೆ, ರಾಮ ಬಂಗೇರ, , ವಸಂತ ಶೆಟ್ಟಿ ಮುಂಡೇಲ್, ಶ್ರೀಧರ್ ಮೂಲ್ಯ ಓಡದಕರಿಯ,ಶರತ್ ಕಾಡಬಾಗಿಲು, ಪ್ರಮೋದ್ ಮಿಲ್ ಬಲಿ, ಜಯಂತ್ ಒಡದ ಕರಿಯ, ಹರೀಶ್ ನಾಯ್ಕ್ ಗಿಳಿಕಾಪು, ರಾಮನಾಥ್ ರೈ ಗರಿಯಾರ್, ಶ್ಯಾಮ್ ಪೂಜಾರಿ ಮುಂಡೇಲ್, ಬಾಬು ಶೆಟ್ಟಿ ಮುಂಡೇಲ್,ನಿತಿನ್ ಪಲ್ಕೆ, ರಮೇಶ್ ರೈ ಪಲ್ಕೆ, ರಘನಾಥ ತೆಲುಗ ಕಜ್ಜೆಲ್, ಪ್ರವೀಣ್ ಕಜ್ಜೆಲ್,ಅರುಣಾ ರಾವ್, ಮೊದಲಾದವರು ಉಪಸ್ಥಿತರಿದ್ದರು.

ಕಾಯ೯ಕ್ರಮದಲ್ಲಿ ಕೇಳ್ತರ ದೇವಸ್ಥಾನದ ವತಿಯಿಂದ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ಸ್ ದೇವದಾಸ್ ಶೆಟ್ಟಿ ಹಿಬರೋಡಿ ಅವರನ್ನು ಗೌರವಿಸಲಾಯಿತು.
ಶಿಕ್ಷಕ ಸುಧಾಕರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ನಾರಾಯಣ್ ರಾವ್ ವಂದಿಸಿದರು.

Related posts

ಎನ್. ಆರ್ ಪುರ ಬಳಿ ಬೈಕಿಗೆ ಕಾರು ಡಿಕ್ಕಿ : ಬೈಕ್ ಸವಾರ ಓಡಿಲ್ನಾಳದ ಯುವಕ ಸಾವು

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಭಾರಿ ರಿಯಾಯಿತಿ

Suddi Udaya

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಉಜಿರೆ: ಎಸ್.ಡಿ.ಎಂ ವಸತಿ ಪ.ಪೂ. ಕಾಲೇಜಿನ ‘ಶೈಕ್ಷಣಿಕ ವರ್ಷಾರಂಭ’ ಹಾಗೂ ವಿದ್ಯಾರ್ಥಿ ಹಾಗೂ ಹೆತ್ತವರಿಗೆ ‘ಮಾಹಿತಿ ಕಾರ್ಯಕ್ರಮ’

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಯುವ ಬಂಟರ ಹಾಗೂ ಮಹಿಳಾ ವಿಭಾಗದ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!