ಶಿಶಿಲ: ಇಲ್ಲಿಯ ಸುದ್ದಿ ಉದಯ ಪತ್ರಿಕೆಯ ಪ್ರತಿನಿಧಿ ಕರುಣಾಕರ ಶಿಶಿಲ ಇವರ ನೂತನ ಗೃಹ “ಮತ್ಸ್ಯ ಕೃಪಾ” ಇದರ ಗೃಹ ಪ್ರವೇಶವು ಮಾ.7 ರಂದು ಜರುಗಿದ್ದು ಇಂದು(ಮಾ.8) ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ರವರು ಭೇಟಿ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶಿಶಿಲ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಅರಸಿನಮಕ್ಕಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಹೊಸ್ತೋಟ ಹಾಗೂ ಇತರರು ಉಪಸ್ಥಿತರಿದ್ದರು.

ಬಂದ ಅತಿಥಿ ಗಣ್ಯರನ್ನು ಕರುಣಾಕರ ರವರು ಸ್ವಾಗತಿಸಿ ಸತ್ಕರಿಸಿದರು.