March 10, 2025
Uncategorized

ಗುರುವಾಯನಕೆರೆ ನವಶಕ್ತಿಕ್ರೀಡಾಂಗಣದಲ್ಲಿ ಆದ್ದೂರಿಯಾಗಿ ನಡೆದ ಐತಿಹಾಸಿಕ ನಾಟಕ “ಛತ್ರಪತಿ ಶಿವಾಜಿ”

ಬೆಳ್ತಂಗಡಿ:ಗುರುವಾಯನಕೆರೆ ಶಕ್ತಿನಗರದ ನವಶಕ್ತಿ
ಕ್ರೀಡಾಂಗಣದಲ್ಲಿ ಮಾ 8 ಶನಿವಾರ ನಡೆದ “ಛತ್ರಪತಿ ಶಿವಾಜಿ” ನಾಟಕವನ್ನು ಸಹಸ್ರಾರು ಮಂದಿ ಕಲಾಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ನೇತೃತ್ವದಲ್ಲಿ ತುಳು ರಂಗ ಭೂಮಿಯಲ್ಲಿ ಶಿವಧೂತೆ ಗುಳಿಗೆ ಖ್ಯಾತಿಯ ವಿಜಯ ಕುಮಾರ್ ಕೊಡಿಯಲ್ ಬೈಲ್ ಸಾರಥ್ಯದ ಕಲಾ ಸಂಗಮ ತಂಡದ ಕಲಾವಿದರಿಂದ “ಛತ್ರಪತಿ ಶಿವಾಜಿ” ಎಂಬ ಐತಿಹಾಸಿಕ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.

ದೇಶ ಭಕ್ತಿ ಹಾಗೂ ಸ್ವರಾಜ್ಯ ಸ್ಥಾಪನೆಗಾಗಿ ದಿಟ್ಟ ಹೋರಾಟ ನಡೆಸುವ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಈ ನಾಟಕವನ್ನು ಸಹಸ್ರಾರು ಮಂದಿ ನಾಟಕ ವೀಕ್ಷಿಸಿ. ಭಗವಾಧ್ವಜ ಹಾರಿಸುತ್ತ ಶಿವಾಜಿಗೆ ಜಯಘೋಷ ಹಾಕಿ ಸಂಭ್ರಮಿಸುತಿದದ್ದು ಎಲ್ಲರ ಗಮನ ಸೆಳೆಯಿತು. ಕೊನೆಯಲ್ಲಿ ವಿಜಯ ಕುಮಾರ್ ಕೊಡಿಯಲ್ ಬೈಲ್ ಸೇರಿದಂತೆ ಕಲಾ ಸಂಗಮ ತಂಡದ ಎಲ್ಲರನ್ನೂ ನವಶಕ್ತಿ ಕುಟುಂಬಸ್ಥರು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ವಿಜಯ ಕುಮಾರ್ ಕೊಡಿಯಲ್ ಬೈಲ್, ನಮ್ಮ ಮಾರ್ಗದರ್ಶಕರಾದ ಉದ್ಯಮಿ ಶಶಿಧ‌ರ್ ಶೆಟ್ಟಿಯವರಂತಹ ಕಲಾ ಪೋಷಕರಿಂದಲೇ ಕಲೆಗೆ ಮತ್ತಷ್ಟು ಗೌರವ,ಕಲಾವಿದರಿಗೆ ಉತ್ತಮ ವೇದಿಕೆ ಸಿಗುತ್ತಿದೆ. ನಮ್ಮ ತಂಡದ ಎಲ್ಲರನ್ನೂ ಕಲಾಭಿಮಾನಿಗಳ ಎದುರು ಗೌರವಿಸಿರುವುದು ತಂಡಕ್ಕೆ ಮತ್ತಷ್ಟು ಶಕ್ತಿ ದೊರಕಿದಂತಾಗಿದೆ.ಅವರ ಕಲಾಪ್ರೀತಿಗೆ, ಅಭಿಮಾನಕ್ಕೆ ನಾವು ಚಿರಋಣಿಗಳು, ಕಲಾಭಿಮಾನಿಗಳ ಪ್ರೋತ್ಸಾಹ ನಮ್ಮ ತಂಡದ ಮೇಲೆ ಸದಾ ಇರಲಿ ಎಂದರು.

ಈ ವೇಳೆ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ್ ಶೆಟ್ಟಿ,ವಿಶ್ರಾಂತ ಪ್ರಾಂಶುಪಾಲ ಕುಮಾರ ಹೆಗ್ಡೆ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ “ಲಕ್ಷ್ಮೀ ಗ್ರೂಪ್ಸ್” ಉಜಿರೆ, ರಾಜೇಶ್ ಶೆಟ್ಟಿ ನವಶಕ್ತಿ,ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಶಕ್ತಿನಗರ, ಸುಚಿತಾ ರಾಜೇಶ್ ಶೆಟ್ಟಿ ನವಶಕ್ತಿ, ಉಪಸ್ಥಿತರಿದ್ದರು.ಅರವಿಂದ ಕುಮಾರ್ ಲಾಯಿಲ, ಜಗದೀಶ್ ಕನ್ನಾಜೆ ಸಹಕರಿಸಿದರು.

Related posts

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಮೇಷ ಜಾತ್ರೆಯ ಪ್ರಯುಕ್ತ ಪಿಲಿಚಾಮುಂಡಿ ದೈವದ ನೇಮೋತ್ಸವ

Suddi Udaya

ಪಟ್ರಮೆ ‘ಸ್ಪಂದನ’ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ವತಿಯಿಂದ, ಉಜಿರೆ ಎಸ್‌.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಉಚಿತ ಇಸಿಜಿ ತಪಾಸಣಾ ಶಿಬಿರ,194 ಮಂದಿಗೆ ತಪಾಸಣೆ

Suddi Udaya

ಅ.30: ಉಜಿರೆಯಲ್ಲಿ ಉದಯ ಚಿಕನ್ ಸೆಂಟರ್ ಶುಭಾರಂಭ

Suddi Udaya

ಅರಸಿನಮಕ್ಕಿ -ಶಿಶಿಲ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಕೊಕ್ಕಡ ಸರಕಾರಿ ಆಸ್ಪತ್ರೆಯ ಬಾವಿಯ ಸ್ವಚ್ಛತಾ ಕಾರ್ಯ

Suddi Udaya

ಕಾಂಗ್ರೆಸ್‌’ಗೆ ಗೆಲುವಿನ ಗ್ಯಾರಂಟಿ ನೀಡಿದ ಜನತೆ ರಕ್ಷಿತ್ ಶಿವರಾಂ

Suddi Udaya
error: Content is protected !!